ಬೆಂಗಳೂರು: ಸಂಕ್ರಾಂತಿಗೆ ಸಿಹಿಸುದ್ದಿ ಕೇಳೋ ಖುಷಿಯಲ್ಲಿದ್ದ ಸಚಿವ ಸ್ಥಾನಾಕಾಂಕ್ಷಿಗಳಿಗೆ ನಾಳೆಯೇ ಸಿಹಿಸುದ್ದಿ ಸಿಗೋ ಲಕ್ಷಣವಿದ್ದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ನಾಳೆ ದೆಹಲಿಗೆ ದೌಡಾಯಿಸಲಿದ್ದಾರೆ.
ನಾಳೆ ಬೆಳಗ್ಗೆ ಸಿಎಂ ಬಿಎಸ್ವೈ 8.20 ರ ಪ್ಲೈಟ್ ನಲ್ಲಿ ದೆಹಲಿಗೆ ತೆರಳಲಿದ್ದು ೧೧ ಗಂಟೆ ವೇಳೆಗೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್ ಶಾ ರನ್ನು ಭೇಟಿ ಮಾಡಲಿದ್ದಾರೆ.
ಈ ಮಧ್ಯೆ ನಾಳೆ ಸಿಎಂ ಬಿಎಸ್ವೈ ದೆಹಲಿಗೆ ಬುಲಾವ್ ಬಂದಿರೋದರಿಂದ ಮತ್ತೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಶಾಸಕರಿಗೆ ಖುಷಿಯಾಗಿದ್ದು ಮತ್ತೆ ಸಿಹಿಸುದ್ದಿ ಸಿಗಬಹುದು ಎಂಬ ನೀರಿಕ್ಷೆ ಮೂಡಿದೆ.
ಒಟ್ಟು ೧೨ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದ್ದು, ಈ ಪೈಕಿ ೩ ಹಾಲಿ ಸಚಿವರಿಗೆ ಕೋಕ್ ನೀಡಲಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು.