ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭಾನುವಾರದಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ನಲ್ಲಿ ಇಬ್ಬರು ನಾಯಕರು ಒಂದು ರೂಂ ಒಳಗೆ ಹೋದರೆ ಒಬ್ಬ ಹೊಸ ಲೀಡರ್ ಹುಟ್ಟುತ್ತಾನೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಒಂದು ಬಾರಿ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಹೇಳಿ ಕಾಂಗ್ರೆಸ್ನವರು ಸ್ವೀಟ್ ಹಂಚಿದ್ದರು. ಅವರ ಪಕ್ಷದಲ್ಲಿ ಇಬ್ಬರು ರೂಂ ಒಳಗೆ ಹೋದರೆ ಒಬ್ಬ ಲೀಡರ್ ಹುಟ್ಟುತ್ತಾನೆ ಆದರೆ ನಮ್ಮ ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗ್ತಾರೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಲಾಕ್ಡೌನ್ ಪ್ಲಾನ್ ಇಲ್ಲದೆಯೇ ಮಾಡಿದ್ದೆಂದು ಆರೋಪಿಸುತ್ತಾರೆ. ಆದರೆ ಅವರಿಗೇ ಜೀವನದಲ್ಲಿ ಒಂದು ಪ್ಲಾನ್ ಇಲ್ಲ.
ಈ ರೀತಿಯ ಟ್ವೀಟ್ ಮಾಡಿ, ದೇಶವನ್ನೇ ಬಿಟ್ಟು ಹೋಗುತ್ತಾರೆ. ಅದಕ್ಕೆ ಅವರು ಪೂರ್ವಜನರನ್ನು ಭೇಟಿ ಮಾಡಲು ಹೋಗಿದ್ದೆಂದು ಎಂದು ಹೆಸರಿಡಲಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರು ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ನೀವು ಕೆಲಸ ಮಾಡಿದ್ರೆ ಒಬ್ಬ ಗ್ರಾಮ ಪಂಚಾಯತಿ ಸದಸ್ಯನೂ ದೇಶದ ಪ್ರಧಾನಿಯಾಗಬಹುದು. ಇದು ನಮ್ಮ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ಅವರು ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)