ಸಾಮಾಜಿಕ ಜಾಲತಾಣಗಳಲ್ಲಿ ಯೂತ್ ಕಾಂಗ್ರೆಸ್ ನಲ್ಲಿ ಗೊಂದಲ ಸೃಷ್ಟಿ ಯತ್ನ: ಬೆಂಬಲಿಗರಿಂದ ಬಿಸಿ ಚರ್ಚೆ

0
401

ಬೆಂಗಳೂರು: ಯುವ ಕಾಂಗ್ರೆಸ್ ಆಯ್ಕೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಮಿಥುನ್ ರೈ ಚಾಣಾಕ್ಷ ಆಟ ಆಡಿದ್ದಾರೆ ಎಂಬ ಮಾತು ಒಂದೆಡೆ ಕೇಳಿಬರುತ್ತಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಬಗ್ಗೆ ಮೌನ ತಾಳಿದ್ದು ತನ್ನ ಬಳಗದಲ್ಲಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆಮಾಡುವ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಡಿ. ಕೆ. ಶಿವಕುಮಾರ್ ಅವರು ಮಂಗಳೂರು ಕಾಂಗ್ರೆಸ್ ಮುಖಂಡರಲ್ಲಿ ಇಕ್ಬಾಲ್ ಕಣ್ಣೂರು ಎಂಬ ವ್ಯಕ್ತಿಯ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಂಗಳೂರು ಮೂಲದಿಂದ ಅಂತಹ ವ್ಯಕ್ತಿ ಕಾಂಗ್ರೆಸ್ ನಲ್ಲಿ ಇಲ್ಲ ಮತ್ತು ಇದು ಬೇರೆ ಪಕ್ಷಗಳ ಮೂಲಕ ನಡೆಯುವ ಕುತಂತ್ರ ಎಂದು ತಿಳಿಸಿರುವುದಾಗಿ ರಾಜ್ಯದಾದ್ಯಂತ ಸುದ್ದಿ ವೈರಲ್ ಆಗಿದೆ.

ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರ ಹೀಗಿದೆ:

ರಿಂದ,
ಇಕ್ಬಾಲ್ ಕಣ್ಣೂರು
ಐಓಸಿ ಕಾಂಗ್ರೆಸ್

ರಿಗೆ,
ಶ್ರೀ ಡಿ.ಕೆ‌ ಶಿವಕುಮಾರ್,
ಕೆಪಿಸಿಸಿ‌ ಅಧ್ಯಕ್ಷರು
ಬೆಂಗಳೂರು

ಮಾನ್ಯರೇ,

ವಿಷಯ: ಕರ್ನಾಟಕ ಯುವ ಕಾಂಗ್ರೆಸ್ ಪ್ರದೇಶ ಸಮಿತಿಯ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯ ಕುರಿತಂತೆ ಗೊಂದಲ ಮೂಡುತ್ತಿರುವ ಕುರಿತು.

ದಿನಾಂಕ 10 ಜನವರಿಯಿಂದ ಪ್ರಾರಂಭವಾಗಿ 11 ಮತ್ತು 12ರಂದು ಕರ್ನಾಟಕ ಯುವ ಕಾಂಗ್ರೆಸ್ ಪ್ರದೇಶ ಸಮಿತಿಯ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಬೂತ್ ಮಟ್ಟದ ನಾಯಕತ್ವದ ಆಯ್ಕೆಯ ಕುರಿತಂತೆ ಚುನಾವಣೆಗೆ ಮತದಾನ ಪ್ರಾರಂಭವಾಗಿದೆ. ಶ್ರೀಯುತ ರಾಹುಲ್ ಗಾಂಧಿಯವರ ಕನಸಿನ ಕೂಸಾದ ಯುವ ಕಾಂಗ್ರೆಸ್‌ನಲ್ಲಿ‌ ಸಮರ್ಥ ನಾಯಕತ್ವ ಹಾಗೂ ಪಾರದರ್ಶಕ ಜವಾಬ್ದಾರಿ ಹಂಚಿಕೆಗಾಗಿ ಆಂತರಿಕ ಚುನಾವಣೆಯನ್ನು‌ ನಡೆಸಲಾಗುತ್ತಿದೆ. ಆದರೆ ಇದೀಗ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ಮಾಧ್ಯಮವು ‘Raksha Ramaiah to head the Youth Congress in Karnataka?’ ಎನ್ನುವ ವರದಿ ಪ್ರಕಟಿಸಿದ್ದು, ಇದನ್ನು ಆಧರಿಸಿ ನ್ಯೂಸ್ 18 ವಾಹಿನಿಯು ‘ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅವಿರೋಧ ಆಯ್ಕೆ ಸಾಧ್ಯತೆ’ ಎನ್ನುವ ವರದಿ ಪ್ರಕಟಿಸುವ ಮೂಲಕ ಯುವ ಕಾಂಗ್ರೆಸ್ ಮತದಾರರ ದಿಕ್ಕು ತಪ್ಪಿಸಿ, ತಪ್ಪು ಮಾಹಿತಿ ಹರಡುವ ಕೆಲಸ‌ ಮಾಡಿದ್ದಾರೆ. ಇದು ಶ್ರೀಯುತ ರಾಹುಲ್ ಗಾಂಧಿಯವರ ಪಾರದರ್ಶಕ ಚುನಾವಣೆಯ ಕನಸಿಗೆ ಧಕ್ಕೆ ತರುವಂತಿದ್ದು, ಸಮಾಜದಲ್ಲಿ ಯುವ ಕಾಂಗ್ರೆಸ್ ಕುರಿತಂತೆ ಜನರು ತಪ್ಪಾಗಿ ಅರ್ಥೈಸುವಂತೆ ಮಾಡಿದೆ. ತಪ್ಪು ಮಾಹಿತಿ ಹರಡಿದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌, ನ್ಯೂಸ್ 18 ಮಾಧ್ಯಮ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ರಕ್ಷಾ ರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲದೆ, ಉಳಿದ ಅಭ್ಯರ್ಥಿಗಳ ಕುರಿತು ಯುವಕಾಂಗ್ರೆಸ್ ಮತದಾರರು ವಿಶ್ವಾಸ ಕಳೆದುಕೊಳ್ಳುವ ರೀತಿಯಲ್ಲಿ ತಪ್ಪು ವರದಿ ಪ್ರಕಟಿಸಿದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ನ್ಯೂಸ್ 18 ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗಿ ತಮ್ಮಲ್ಲಿ‌ ವಿನಂತಿಸಿಕೊಳ್ಳುತ್ತಿದ್ದೇನೆ. ಈಗಾಗಲೇ 59 ಸಾವಿರ ಮತದಾರರು ಮತ ಚಲಾಯಿಸಿದ್ದು, ಮುಂದಿನ ದಿನಗಳ ಮತಚಲಾವಣೆಯ ಮೇಲೆ ಈ ತಪ್ಪು ವರದಿಗಳು ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ತಾವು ಈ ಕುರಿತು ಯುವಕಾಂಗ್ರೆಸ್ ಮತದಾರ‌ರಿಗೆ ಸ್ಪಷ್ಟೀಕರಣ ನೀಡಬೇಕಾಗಿಯೂ ಕೇಳಿಕೊಳ್ಳುತ್ತಿದ್ದೇನೆ.

ಧನ್ಯವಾದಗಳೊಂದಿಗೆ

LEAVE A REPLY

Please enter your comment!
Please enter your name here