ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿತಾರೆ ಎನ್ನುವ ಕುರಿತು ಸಿದ್ದರಾಮಯ್ಯ ಅವರಿಗೆ ಅಮಿತಷಾ ಅವರು ಫೋನ್ ಮಾಡಿರುವರೇನ್ರೀ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದರು.
ಸೋಮವಾರ ಹಾವೇರಿಯ ಜಿಲ್ಲಾಡಳಿತ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಸಿ ಎಂ ಬಿಎಸವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿತಾರೆ ಎಂಬ ಸಿದ್ದರಾಮಯ್ಯ ಹೇಳಿದ್ದಕ್ಕೆ ಬೆಲೆ ಇದೆ ಏನ್ರಿ? ಎಂದು ಖಾರವಾಗಿ ಪ್ರತಿಕ್ರೀಯಿಸಿಸ ಅವರು. ಸಿದ್ದರಾಮಯ್ಯ ಅವರದು ಬಿಜೆಪಿ ಪಕ್ಷಾನಾ ಅವರುದು ಕಾಂಗ್ರೆಸ್ ಪಕ್ಷ. ಇದನ್ನು ನಮ್ಮ ಪಕ್ಷದ ವರಿಷ್ಠರು ಹೇಳಬೇಕು. ಇದೆಲ್ಲಾ ಊಹಾಪೋಹ ಅಷ್ಟೇ ಎಂದರು.
2023ಕ್ಕೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗ್ತಾರೆ ಎಂಬ ಹೇಳಿಕೇಗೆ ಪ್ರತಿಕ್ರೀಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಹಗಲು ಕನಸು ಕಾಣ್ತಾ ಇದಾರೆ ಅಷ್ಟೇ. 37 ಜನ ಶಾಸಕರನ್ನು ಇಟ್ಟುಕೊಂಡು ಮುಖ್ಯ ಮಂತ್ರಿ ಸ್ಥಾನ ಕೊಟ್ರೆ ಅದನ್ನು ವಿಭಾಗಿಸಲಾಗಿದೆ ಬಂದ ಭಾಗ್ಯ ಕಾಲಿಂದಾ ಒದ್ದಿದ್ದಾರೆ ಇನ್ನೇನು ಅವರು ೨೦೨೩ಕ್ಕೇ ಅವರೇನು ಮುಖ್ಯಮಂತ್ರಿ ಆಗ್ತಾರೆ?. ಅವರು ಮುಖ್ಯಮಂತ್ರಿ ಅಗುವ ಕುರಿತು ಕನಸಿನಮಾತು ಎಂದು ತಿಳಿಸಿದರು.
2023 ಕ್ಕೆ ಬಿಜೆಪಿ ಪಕ್ಷ 150 ಸೀಟು ತಗೊಂಡು ನಿಚ್ಚಳವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಕೃಷಿ ಕಾಯ್ದೆ ವಿರೋಧಿಸಿ ಜೈಲಬರೊ ಚಳುವಳಿ ವಿಚಾರವಾಗಿ ಪ್ರತಿಕ್ರೀಯಿಸಿದ ಪಾಟೀಲ. ಕೃಷಿ ಕಾಯ್ದೆ ವಿರೋಧ ಮಾಡ್ತಾರೆ ಅಂದರೆ ಅವರು ಕೃಷಿಕರನ್ನು ವಿರೋಧಿಸ್ತಾರೆ ಅಂತ ಅರ್ಥಾ. ಈಗ ಬಂದಿರುವಂತಹ ಕೃಷಿ ಕಾಯ್ದಿಗಳು ರೈತರ ಪರವಾಗಿ ಇದ್ದಾವೆ. ಇವುಗಳನ್ನು ವಿರೋಧ ಮಾಡುವವರು ರೈತರ ವಿರೋಧಿಗಳೇ ಎಂದರ್ಥ ಎಂದರು.