ಹೊಸದಿಲ್ಲಿ: ವಿವಾದಿತ ಕೃಷಿ ಕಾಯಿದೆ ವಿಚಾರವಾಗಿ ಸುಪ್ರೀಂ ಕೋರ್ಟು ಮೋದಿ ಸರಕಾರಕ್ಕೆ ಛಳಿ ಬಿಡಿಸಿದೆ.

ರೈತರ ಕಾಯಿದೆ ಜಾರಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟು ಮೋದಿ ಸರಕಾರಕ್ಕೆ ಹೇಳಿದೆ.

ಇದೇ ವೇಳೆ ರೈತರ ಪ್ರತಿಭಟನೆಯನ್ನು ಗಮನಿಸಿ ಸದ್ಯಕ್ಕೆ ಕೃಷಿ ಕಾಯಿದೆಗಳ ಜಾರಿಯನ್ನು ಸ್ಥಗಿತಗೊಳಿಸವಂತೆಯೂ ಹೇಳಿದೆ.

ಕೃಷಿ ಕಾಯಿದೆಗಳನ್ನು ನಿಮ್ಮ ಕೈಯಲ್ಲಿ ನಿಲ್ಲಿಸಲಾಗದಿದ್ದರೇ ಹೇಳಿ ನಾವೇ (ಕೋರ್ಟು) ಸ್ಥಗಿತಗೊಳಿಸುತ್ತೇವೆ ಎಂತಲೂ ಸುಪ್ರೀಂ ಕೋರ್ಟು ಸರಕಾರಕ್ಕೆ ಕಟ್ಟೆಚ್ಚರ ನೀಡಿದೆ.

ಕಾಯ್ದೆ ಕುರಿತು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಅದರಲ್ಲಿಯೂ ರೈತರ ಪ್ರತಿಭಟನೆ ಕುರಿತು ಮೋದಿ ಸರ್ಕಾರದ ವಿರುದ್ಧ ತೀವ್ರ ದೇಶದ ಅತ್ಯುನ್ನತ ಕೋರ್ಟು ತೀವ್ರ ಅಸಮಾಧನ ಹೊರಹಾಕಿದೆ.

ವಯೋವೃದ್ಧರು, ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ಗುದಾರೆ. ಇಷ್ಟಾದರೂ ಕಾಯಿದೆ ಬಗ್ಗೆ ಸರಕಾರ ಪ್ರತಿಷ್ಠೆ ತೋರುತ್ತಿರುವುದು ಸರಿಯಲ್ಲ ಎಂದು ಅದು ಹೇಳಿದೆ.

ಕೃಷಿ ಕಾಯಿದೆ ವಿರೋಧಿಸಿ ಹಲವರು ಮಂದಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಅದನ್ನು ಸಮರ್ಥಿಸಿಕೊಂಡು ಯಾರೂ ನ್ಯಾಯ ಕೇಳಿ ಬಂದಿಲ್ಲ ಎಂಬುದನ್ನು ಸರಕಾರ ಗಮನಿಸಬೇಕು ಎಂದು ಕೋರ್ಟು ಹೇಳಿದೆ.

ಕಳೆದ ನಲವತ್ತು ದಿನಗಳಿಂದ ದಿಲ್ಲಿ ಗಡಿಯಲ್ಲಿ ರೈತರು ಕೃಷಿ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಏಳೆಂಟು ಸುತ್ತಿನ ಮಾತುಕತೆ ನಡೆಸಿದ್ದರೂ ಈವರೆಗೆ ಯಾವುದೇ ಫಲ ನೀಡಿಲ್ಲ.

LEAVE A REPLY

Please enter your comment!
Please enter your name here