ಮಂಗಳೂರು: ಬಂಟ್ವಾಳದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ರಾಜ್ಯ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಈ ಬಾರಿ ಕೂಡಾ ಸುಳ್ಯ ಶಾಸಕ ಅಂಗಾರ ಸಚಿವ ಆಗೋಲ್ಲ ಅನ್ನುವ ಸ್ಪಷ್ಟ ಸುಳಿವು ನೀಡಿದ್ದಾರೆ.

ಕರ್ನಾಟಕ ಕರಾವಳಿಯ ಶಾಸಕರ ಪೈಕಿ ಸುಳ್ಯ ಕ್ಷೇತ್ರದ ಎಸ್ ಅಂಗಾರ ಅವರಿಗೆ ವಿಶೇಷ ಸ್ಥಾನಮಾನವಿದೆ. ಐದು ಬಾರಿಗೆ ಗೆದ್ದ ಅಂಗಾರ ಅವರನ್ನು ಪಕ್ಷಕ್ಕಿಂತಲೂ ಮುಖ್ಯವಾಗಿ ಜನಸ್ನೇಹಿ ಆಗಿ ಗುರುತಿಸುತ್ತಾರೆ.

ಅವರ ಕ್ಷೇತ್ರ ಮೀಸಲು ಆಗಿರೋದು ಒಂದೆಡೆ ಆದರೆ, ಸುಳ್ಯ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ಅಗತ್ಯ ಇರೋದು ಇನ್ನೊಂದು ಕಡೆಯಾಗಿದೆ. ಈ ಮಧ್ಯೆ ಸುಳ್ಯ ಕ್ಷೇತ್ರ ಬುದ್ದಿವಂತರದ್ದಾಗಿದ್ದು, ಕರಾವಳಿಯಲ್ಲಿನ ಕಲೆ ಮತ್ತು ಸಂಸ್ಕೃತಿ ಚಟುವಟಿಕೆಗಳಿಗೆ ಹೆಸರಾದ ಊರಾಗಿದೆ.
ಈ ಕ್ಷೇತ್ರಕ್ಕೆ ಸಚಿವರೊಬ್ಬರ ಕ್ಷೇತ್ರ ಎನ್ನುವ ಭಾಗ್ಯ ಬರೋದಕ್ಕೆ ಬಹುಷಃ ”ಶಿಸ್ತು” ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.
ಮಂಗಳೂರು ವಾರ್ತೆ