Tuesday, June 6, 2023
Homeಕರಾವಳಿಪಣಂಬೂರು: ಎಂಸಿಎಫ್ ನಿಂದ ದೇವರು ಮೆಚ್ಚುವ ಕೆಲಸ: ಡಾ. ಭರತ್ ಶೆಟ್ಟಿ ವೈ

ಪಣಂಬೂರು: ಎಂಸಿಎಫ್ ನಿಂದ ದೇವರು ಮೆಚ್ಚುವ ಕೆಲಸ: ಡಾ. ಭರತ್ ಶೆಟ್ಟಿ ವೈ

- Advertisement -


Renault

Renault
Renault

- Advertisement -

ಪಣಂಬೂರು: ಎಂಸಿಎಫ್ ನಿಂದ ದೇವರು ಮೆಚ್ಚುವ ಕೆಲಸ: ಡಾ. ಭರತ್ ಶೆಟ್ಟಿ ವೈ
ಪಣಂಬೂರು,ಜ.ರಸಗೊಬ್ಬರ ತಯಾರಿಕಾ ಕಂಪನಿಯು ಸಾಮಾಜಿಕ ಬದ್ದತಾ ಕಾರ್ಯದಡಿ ತನ್ನ ಅನುದಾನವನ್ನು ಮಾನವೀಯ ನೆಲೆಯಲ್ಲಿ ಜನರ ಬಾಳಿನಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಿದ್ದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

.

ಪಣಂಬೂರು ಎಂಸಿಎಫ್ನಲ್ಲಿ ಮಂಗಳವಾರ ಕೃತಕ ಅಂಗಾಂಗ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರು ಹಲವಾರು ಅಭಿವೃದ್ಧಿ ಕೆಲಸಗಳಿಗಾಗಿ ಬೇಡಿಕೆ ಸಲ್ಲಿಸುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರ ಪ್ರವಾಸದ ವೇಳೆ ಅಥವಾ ಕಚೇರಿಗೆ ಬಂದು ದಿವ್ಯಾಂಗರು ಕೃತಕ ಅಂಗಾಗ ನೀಡುವಂತೆ ಮನವಿ
ಸಲ್ಲಿಸುತ್ತಿದ್ದಾಗ ಗುಣಮಟ್ಟದ ಸಲಕರಣೆ ವಿತರಿಸಲು ಎಂಸಿಎಫ್ಗೆ ಮನವಿ ಮಾಡಿದ ಮೇರೆಗೆ ಕಳೆದ ಮೂರು ವರ್ಷಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ನೀಡುತ್ತಿದ್ದಾರೆ. ಇದರ ಜತೆಗೆ ಶಿಕ್ಷಣ, ಆರೋಗ್ಯ, ಉಚಿತ ವೈದ್ಯಕೀಯ ಶಿಬಿರಗಳನ್ನು ಮಾಡುತ್ತಾ ಬರುತ್ತಿದ್ದಾರೆ.ಕಂಪನಿಗಳು ಲಾಭಂಶದ ಒಂದು ಅಂಶವನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸಿದಾಗ ಸಾರ್ಥಕವಾಗುತ್ತದೆ ಎಂದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments