ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪ್ರಜಾಕೀಯ ಬೆಂಬಲಿತ ಅಭ್ಯರ್ಥಿ ಚೇತನ್ ಕುಮಾರ್ ಗೆಲುವು ಸಾಧಿಸಿದ್ದಾರೆ.
ಈ ಹಿನ್ನೆಲೆ ಇಂದು ಉಪೇಂದ್ರ ಅರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು ಉಪ್ಪಿಗೆ ಭರ್ಜರಿ ಸ್ವಾಗತ ಕೋರಿದರು.
ಬಳಿಕ ಟ್ರಾಕ್ಟರ್ ಟ್ರೈಲರ್ ಮೇಲೆ ನಿಂತು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಉಪೇಂದ್ರ, ಪ್ರಜಾಕೀಯ ಪರವಾಗಿ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದೀರಿ.
ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು. ಎಲ್ಲಾ ಹಳ್ಳಿಗೂ ನಿಮ್ಮ ಮಾದರಿಯನ್ನ ಸಾರುತ್ತೇನೆ. ಪ್ರತಿ ಹಳ್ಳಿಗೂ ನೀವು ಮಾಡೆಲ್.
ನೀವು ಗೆಲ್ಲಿಸಿರುವ ಅಭ್ಯರ್ಥಿ ಪ್ರಭುವಲ್ಲ, ಕೆಲಸಗಾರ ಎಂದು ಹೇಳಿದ್ದಾರೆ.ಇದೇ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು