ಉಡುಪಿ : ಪ್ರಯಾಣಿಕರು ಬಸ್ಸಿಗೆ ಹತ್ತಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾಡ್ ಹಿಡಿದು ಖಾಸಗಿ ಬಸ್ ಸಿಬ್ಬಂದಿ ಜಗಳವಾಡಿರುವ ಘಟನೆ ಉಡುಪಿ ಜಿಲ್ಲೆಉಯ ಕಾಪುವಿನಲ್ಲಿ ನಡೆದಿದೆ.

ಕೋಹಿನೂರ್ ಹಾಗೂ ಎಕೆಎಂಎಸ್ ಬಸ್ ಗಳು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ನಡೆಸುತ್ತಿದ್ದು, ಪ್ರಯಾಣಿಕ ರನ್ನು ಬಸ್ ಗೆ ಹತ್ತಿಸುವ ವಿಚಾರದಲ್ಲಿ ಗಲಾಟೆ ನಡೆದಿದೆ. ಕೋಹಿನೂರ್ ಬಸ್ ಚಾಲಕ ಸಫಿಯುಲ್ಲಾ ಹಾಗೂ ಎಕೆಎಂಎಸ್ ಬಸ್ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್ ಶೆಟ್ಟಿ ನಡುವೆ ಗಲಾಟೆ ನಡೆದಿದೆ. ಈ ವೇಳೆಯಲ್ಲಿ ರಾಡ್ ಹಿಡಿದು ಪರಸ್ಪರ ಜಗಳವಾಡಿದ್ದಾರೆ.

ಖಾಸಗಿ ಬಸ್ ಸಿಬ್ಬಂದಿಗಳು ನಡೆಸುತ್ತಿದ್ದ ಜಗಳವನ್ನು ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರು ಬಸ್ಸಿನಲ್ಲಿ ಇರುವಾಗಲೇ ಗೂಂಡಾವರ್ತನೆ ತೋರಿರುವ ಖಾಸಗಿ ಬಸ್ ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಖಾಸಗಿ ಬಸ್ ಸಿಬ್ಬಂದಿಗಳು ಜಗಳಕ್ಕೆ ಇಳಿಯುತ್ತಿದ್ದಂತೆಯೇ ಪ್ರಯಾಣಿಕರು ಕಂಗಾಲಾಗಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here