ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವ್ರು ನೂತನ ಸಚಿವರ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿರುವ ಸಂಕ್ರಾಂತಿಯ ಸಿಹಿ ಸವಿಯುತ್ತಿದ್ರೇ, ಸಚಿವ ಆಕಾಂಕ್ಷಿಗಳು ಮಾತ್ರ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಅದ್ರಂತೆ, ಈ ಬಾರಿ ತನಗೆ ಮಂತ್ರಿ ಪಟ್ಟ ಸಿಕ್ಕೇ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ಹೊನ್ನಳ್ಳಿ ಶಾಸಕ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ.ಬಿಜೆಪಿ ಉಸ್ತುವರಿ ಅರುಣ್ ಸಿಂಗ್ʼರನ್ನ ಏಪೋರ್ಟ್ʼನಲ್ಲಿ ಸ್ವಾಗತ ಮಾಡಿದ ಶಾಸಕ ರೇಣುಕಾಚಾರ್ಯ, ಅವ್ರ ಮುಂದೆ ತಮ್ಮ ದುಃಖವನ್ನ ತೋಡಿಕೊಂಡಿದ್ದಾರೆ. ಮಂತ್ರಿಗಿರಿ ಸಿಗದಿದ್ದಕ್ಕೆ ನಿರಾಶೆಯಿಂದ ಕಣ್ಣಿರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.ನಾನು ಸಚಿವ ಸ್ಥಾನಕ್ಕಾಗಿ ಲಾಭಿ ಮಾಡಿದವನಲ್ಲ.
ಲಾಭಿ ಮಾಡಿದವರಿಗೆ ಸ್ಥಾನ ಸಿಕ್ಕಿದೆ. ಆದ್ರೂ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗುತ್ತೆ ಎನ್ನುವ ವಿಶ್ವಾಸವಿತ್ತು. ಆದ್ರೆ, ನಿರೀಕ್ಷೆ ಉಸಿಯಾಗಿದ್ದು, ನನಗಷ್ಟೇ ಅಲ್ಲ ಕಾರ್ಯಕರ್ತರಿಗೆ ದುಃಖವಾಗಿದೆ. ಹಾಗಾಗಿ ಅರುಣ್ ಸಿಂಗ್ ಅವ್ರನ್ನ ಇದೇ ಮೊದಲ ಬಾರಿಗೆ ಭೇಟಿಯಾಗ್ತಿದ್ದು, ಎಲ್ಲವನ್ನೂ ವಿವರಿಸಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.