ದ. ಕ. ದಲ್ಲಿ ವೈರಲ್ ಆಗುತ್ತಿದೆ’ಅಂಗಾರ ಬುಧವಾರ ಮಂತ್ರಿ ಆದರು’
ಮಂಗಳೂರು: ಆರು ಬಾರಿ ಶಾಸಕರಾಗಿ ಇದೀಗ ಸಚಿವರಾದ ಸುಳ್ಯದ ಅಂಗಾರ ಬಗ್ಗೆ ಎಲ್ಲೆಲ್ಲೂ ಮಾತೇ ಮಾತು. ಅದೂ ಸೋಶಿಯಲ್ ಮೀಡಿಯಾ ಬಗ್ಗೆ ಕೇಳಬೇಕಾ?
ಅಂಗಾರ ಸಚಿವರಾದ ಹಿನ್ನೆಲೆ ಪಕ್ಷ ಬೇಧ ಮರೆತು ಸಂಭ್ರಮಾಚರಣೆ ನಡೆಯುತ್ತಿದೆ. ಸರಳ ಸಜ್ಜನಿಕೆಯ ರಾಜಕಾರಣಿ ಸಚಿವರಾಗಿ ಒಳ್ಳೆಯ ಹೆಸರು ಪಡೆಯಲಿ ಎಂಬ ಆಶಯ ವ್ಯಕ್ತವಾಗಿದೆ.
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಿವಿಧ app ಗಳನ್ನು ಬಳಸಿಕೊಂಡು ಅಂಗಾರ ಸಚಿವರಾದ ವಿಷಯ share ಮಾಡಲಾಗುತ್ತಿದೆ. ಅಂಗಾರ ಅವರ ಹೆಸರಲ್ಲಿ ಇರುವ ಮೋಡಿಯೇ ಕಾರಣವಾಗಿದೆ.
ತುಳುವಿನಲ್ಲಿ ‘ಅಂಗಾರೆ’ ಎಂದರೆ ಮಂಗಳವಾರ ಎಂದರ್ಥ. ಹಾಗಾಗಿ ” ಅಂಗಾರ ಬುಧವಾರ ಮಂತ್ರಿ ಆದರು” ಎನ್ನುವುದು ಎಲ್ಲಾ ವೈರಲ್ ಟಾಕ್/ಮೆಸೇಜ್ ಗಳ ಪ್ರಮುಖ ಅಂಶವಾಗಿದೆ.
ಮಂಗಳೂರು ವಾರ್ತೆ