Monday, October 2, 2023
Homeಕರಾವಳಿನಟ ರೂಪೇಶ್ ಶೆಟ್ಟಿ ಕಾರು ಅಪಘಾತ

ನಟ ರೂಪೇಶ್ ಶೆಟ್ಟಿ ಕಾರು ಅಪಘಾತ

- Advertisement -Renault

Renault
Renault

- Advertisement -

ಮಂಗಳೂರು : ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾ ಗಿದ್ದು, ರೂಪೇಶ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಂಗಳೂರಿನಿಂದ ಮಂಗಳೂರಿಗೆ ತನ್ನ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಈ ಅವಘಡ ಸಂಭವಿಸಿದೆ. ಆದರೆ ಘಟನೆಯಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಯಾವುದೇ ರೀತಿಯಲ್ಲಿ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.ಆರ್ ಜೆ ಆಗಿ ಕರಾವಳಿಯಾದ್ಯಂತ ಮನೆ ಮಾತಾಗಿರುವ ರೂಪೇಶ್ ಶೆಟ್ಟಿ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತುಳು ಚಿತ್ರರಂಗದ ಗಿರ್ಗಿಟ್ ಸಿನಿಮಾ ಬಹುಪ್ರಖ್ಯಾತಿಯನ್ನು ತಂದುಕೊಟ್ಟಿತ್ತು. ನಟನೆಯ ಜೊತೆಗೆ ನಿರ್ದೇಶನ ದಲ್ಲಿಯೂ ರೂಪೇಶ್ ಶೆಟ್ಟಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಕೇವಲ ತುಳು ಸಿನಿಮಾ ಮಾತ್ರವಲ್ಲದೇ ಕನ್ನಡ ನಿಶ್ಯಬ್ದ-2, ಡೇಜಂರ್ ಝೋನ್, ಪಿಶಾಚಿ 2 ಮುಂತಾದ ಸಿನಿಮಾಗಳಲ್ಲಿಯೂ ರೂಪೇಶ್ ಶೆಟ್ಟಿ ಅಭಿನಯಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments