ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ
ಬೆಂಗಳೂರು: ಕರ್ನಾಟಕದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಮೊಳಗಿಸಿದ್ದಾರೆ. ಕಾಂಗ್ರೆಸ್ ಸಮಾಧಾನಕರ ಸಾಧನೆಯಲ್ಲಿದ್ದರೆ, ಜೆಡಿಎಸ್ ಸಾಧನೆ ತೀರಾ ಕೆಳಕ್ಕೆ ಇಳಿದಿರುವುದು ಈ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ಪ್ರಕಟಗೊಂಡಿದೆ.

ಅಂತಿಮ ಹಂತದ ಪ್ರಕಟನೆಯ ಮೊದಲು ಬಿಜೆಪಿ ಬೆಂಬಲಿತ 7940 ಅಭ್ಯರ್ಥಿಗಳ ಗೆಲುವು ಪ್ರಕಟವಾಗಿದೆ. ಕಾಂಗ್ರೆಸ್‍ನ 5586, ಜೆಡಿಎಸ್ ನ 2667 ಮತ್ತು 2257 ಇತರೇ ಅಭ್ಯರ್ಥಿಗಳು ಜಯದ ಉತ್ಸಾಹದಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 287 ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ 98, ಜೆಡಿಎಸ್ ಬೆಂಬಲಿತ 1 ಹಾಗೂ 67 ಮಂದಿ ಇತರರು ಜಯ ಸಾಧಿಸಿದ್ದಾರೆ.