ಕರಾವಳಿಯಲ್ಲಿ ರಾಜಕೀಯ ಮುನಿಸು ಆರಂಭ ಆಗಿದ್ಯಾ? ಅಂಗಾರ ಮೇಲೆ ಕೆಂಗಣ್ಣು ಇದೆಯಾ?

0
433

ಮಂಗಳೂರು: ಸುಳ್ಯ ಶಾಸಕ ಎಸ್. ಅಂಗಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇ ತಡ ಕರಾವಳಿಯಲ್ಲಿ ಬೆಂಬಲಿಗರ ಮೂಲಕ ಕೆಲವರು ಅಸಮಾಧಾನ ಸೂಚಿಸಿರುವುದು ಬೆಳಕಿಗೆ ಬರುತ್ತಿದೆ.

ಕುಂದಾಪುರದಿಂದ ಹಾಲಾಡಿ ಶ್ರೀನಿವಾಸ ಶೆಟ್ಟರ ಬೆಂಬಲಿಗರ ಮೂಲಕ ಅಸಮಾಧಾನ ಒಂದೆಡೆ ಆದರೆ ಇನ್ನೊಂದೆ ಡೆ ಸುನಿಲ್ ಕುಮಾರ್ ನೇರವಾಗಿ ಹೇಳಿಕೆ ಕೊಟ್ಟಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಕೂಡ ಅತೃಪ್ತರು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೆಲ್ಲದರ ಹಿಂದೆ ಏನೇನಿದೆ?

ಅಂಗಾರ ಅವರು ಸಚಿವ ಆಗಿರೋದು ಬಹುತೇಕ ಮಂದಿಗೆ ಸಂತೋಷ ತಂದಿದ್ದರೆ, ಒಂದಷ್ಟು ಜನರಿಗೆ ಅತೃಪ್ತಿ ಇದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ರಾಜಕೀಯದಲ್ಲಿ ಬಹಳಷ್ಟು ಅನುಭವಸ್ಥ ರು ಎಂಬ ಕಾರಣಕ್ಕೆ ಸಚಿವ ಪಟ್ಟ ಕೊಡಬೇಕಿತ್ತು ಎಂಬುದು ಅವರ ಬೆಂಬಲಿಗರ ವಾದ.

ಸುನಿಲ್ ಕುಮಾರ್ ಅವರಿಗೂ ಭಾರೀ ನಿರೀಕ್ಷೆ ಹುಸಿ ಆದಂಥ ಅನುಭವ ಆಗಿದೆ ಎನ್ನಲಾಗಿದೆ. ಇವರ ಅಸಮಾಧಾನ ಅಷ್ಟೊಂದು ಪರಿಣಾಮಕಾರಿ ಅಲ್ಲವಾದರೂ, ಹಾಲಾಡಿ ವಿಚಾರ ಭುಗಿಲೆದ್ದರೆ, ಸಮಸ್ಯೆ ಆಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇನ್ನು ಕೋಟ ಅವರ ಮುನಿಸು ಯಾಕೆಂದು ಗೊತ್ತಾಗಿಲ್ಲ. ಅವರ ಸದ್ಯದ ಖಾತೆ ಕೈ ಜಾರುತ್ತೋ ಎಂಬ ಅನುಮಾನದಿಂದ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಯಡಿಯೂರಪ್ಪ ಅವರು ಇದೆಲ್ಲಾ ವಿಚಾರದಲ್ಲಿ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬಲ್ಲ ರಾದರೂ, ಟ್ರಬಲ್ ಶೂಟರ್ ಗಳ ಅಗತ್ಯ ಮತ್ತೆ ಬರಬಹುದು ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here