ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಳಿ ಬಾರ್ ಒಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಮತ್ತು ಮದ್ಯದ ಬಾಟಲಿಗಳನ್ನು ದೋಚಿದ ಘಟನೆ ಮೆಲ್ಕಾರ್ ಸಮೀಪ ಕಂದೂರು ಎಂಬಲ್ಲಿ ನಡೆದಿದೆ.
ಬಂಟ್ವಾಳ ಸಮೀಪ ಕಂದೂರಿನ ಸುರಭಿ ಬಾರಿನ ಎದುರು ಶಟರ್ ಬೀಗ ಮುರಿದು ಒಳಗೆ ಬಂದ ಕಳ್ಳರು ಕೌಂಟರಿನಲ್ಲಿ ಇದ್ದ ಸುಮಾರು ಮೂರು ಲಕ್ಷ ಹಣ ಮತ್ತು ಮದ್ಯದ ಬಾಟಲಿಗಳನ್ನು ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ.
ಕಳ್ಳತನ ಪ್ರಕರಣ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.