ನವದೆಹಲಿ: ಕೋವಿಡ್ ನಂತರದ ವಿಷಮ ಸ್ಥಿತಿ ಎದುರಿಸಲು ದೇಶ ಸನ್ನದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಭಾರೀ ನಿರೀಕ್ಷೆ ಮತ್ತು ಹೊಂದಿದೆ. ಈ ನಿರೀಕ್ಷೆಗೆ ಫೆಬ್ರವರಿ ಒಂದರಂದು ಉತ್ತರ ಸಿಗಲಿದೆ.
ಸಂಸತ್ತು ಕಾರ್ಯಾಲಯ ನೀಡಿರುವ ಪ್ರಕಾರ, ಜನವರಿ 29 ರಂದು ಅಧಿವೇಶನ ಆರಂಭಗೊಳ್ಳಲಿದೆ. ಅಂದು ರಾಷ್ಟ್ರಪತಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ ಒಂದರಂದು ಬಜೆಟ್ ಮಂಡನೆ ಆಗಲಿದೆ. ಅಧಿವೇಶನ ಏಪ್ರಿಲ್ ಎಂಟರವರೆಗೂ ಮುಂದುವರೆಯಲಿದೆ.
ಪ್ರಧಾನಿ ಮೋದಿ ಸರ್ಕಾರ ಈ ಬಾರಿ ಯಾವ ಯಾವ ರೀತಿಯಲ್ಲಿ ಜನಸ್ನೇಹಿ ಯೋಜನೆಗಳ ಮೂಲಕ ಕೋವಿಡ್ ನಿಂದ ಕಷ್ಟಕ್ಕೊಳಗಾಗಿರುವ ಅರ್ಥ ವ್ಯವಸ್ಥೆಯನ್ನು ಮೇಲೆತ್ತಬಹುದು ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ.