Sunday, May 28, 2023
Homeಕೃಷಿಕಿಸಾನ್ ಸಮ್ಮಾನ್ ಯೋಜನೆ ಹೆಚ್ಚಳ ಸಾಧ್ಯತೆ!

ಕಿಸಾನ್ ಸಮ್ಮಾನ್ ಯೋಜನೆ ಹೆಚ್ಚಳ ಸಾಧ್ಯತೆ!

- Advertisement -


Renault

Renault
Renault

- Advertisement -

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಬಜೆಟ್ ನಲ್ಲಿ ರೈತರಿಗೆ ಸರ್ಕಾರ ಮತ್ತಷ್ಟು ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ 6 ಸಾವಿರ ರೂಪಾಯಿ ಸಿಗ್ತಿದೆ. 2021-2022ರ ಬಜೆಟ್ ನಲ್ಲಿ ಇದನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೀಡಲಾಗ್ತಿರುವ ಮೊತ್ತ ಹೆಚ್ಚಿಸುವಂತೆ ರೈತರು ಒತ್ತಾಯಿಸಿದ್ದಾರೆ. ಸರ್ಕಾರ ತಿಂಗಳಿಗೆ ನೀಡುವ 500 ರೂಪಾಯಿ ಸಾಲುವುದಿಲ್ಲ. ಒಂದು ಎಕರೆ ಭತ್ತದ ಬೆಳೆಗೆ 3 ರಿಂದ 3.5 ಸಾವಿರ ರೂಪಾಯಿ ಖರ್ಚಾಗುತ್ತದೆ. ಕಬ್ಬಿನ ಬೆಳೆಗಾದ್ರೆ 2 ರಿಂದ ಎರಡೂವರೆ ಸಾವಿರ ಖರ್ಚಾಗುತ್ತದೆ ಎಂದು ರೈತರು ಹೇಳಿದ್ದಾರೆ.

ಸರ್ಕಾರ ರೈತರಿಗೆ ನೀಡುವ ಹಣವನ್ನು ಹೆಚ್ಚಿಸಿದ್ರೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರ 2018ರಲ್ಲಿ ಈ ಯೋಜನೆ ಶುರು ಮಾಡಿದೆ. ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗ್ತಿದೆ. 2020ರ ಡಿಸೆಂಬರ್ 25ರಂದು ಸುಮಾರು 18,000 ಕೋಟಿ ರೂಪಾಯಿಯನ್ನು 9 ಕೋಟಿ ರೈತರ ಖಾತೆಗೆ ವರ್ಗಾಯಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments