Friday, October 7, 2022
Homeಕ್ರೈಂಶಾರ್ಜಾದ ಒಳಉಡುಪಿನಲ್ಲಿ 2 ಕಿಲೋ ಚಿನ್ನ!

ಶಾರ್ಜಾದ ಒಳಉಡುಪಿನಲ್ಲಿ 2 ಕಿಲೋ ಚಿನ್ನ!

- Advertisement -
Renault

Renault

Renault

- Advertisement -

ಮಂಗಳೂರು, ಜ.15 : ಶಾರ್ಜಾದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದು, 1.09 ಕೋಟಿ. ರೂ ಮೌಲ್ಯದ 2.15 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

  • ಗುರುವಾರ ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ (37) ಹಾಗೂ ಮೊಹಮ್ಮದ್‌‌ ಶೋಹೈಬ್‌ (31) ಎನ್ನುವವರು ಶಾರ್ಜಾದಿಂದ ಏರ್‌ ಇಂಡಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿ‌ದ್ದಾರೆ. ಈ ಸಂದರ್ಭ ಸಂಶಯದ ಮೇರೆಗೆ ಅವರನ್ನು ತಪಾಸಣೆ ಮಾಡಲಾಗಿದ್ದು, ಈ ವೇಳೆ ಒಳ ಉಡುಪಿನಲ್ಲಿ 24 ಕ್ಯಾರೆಟ್‌ನ 2.154 ಕೆ.ಜಿ. ಚಿನ್ನವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನಸ್ ಜಾರ್ಜ್ ಅವರು ತಂಡವನ್ನು ಅಭಿನಂದಿಸಿದ್ದು, ಕಸ್ಟಮ್ಸ್‌ ಉಪ ಆಯುಕ್ತ ಪ್ರವೀಣ ಕಂಡಿ, ಸೂಪರಿಂಟೆಂಡೆಂಟ್‌ ಶ್ರೀಕಾಂತ್‌ ಕೆ., ಶುಭೆಂದು ರಂಜನ್‌ ಬೆಹರೆ, ನವೀನ್‌ಕುಮಾರ್‌ ಅವರನ್ನು ಒಳಗೊಂಡ ತಂಡ ಕಾರ್ಯಚರಣೆ ನಡೆಸಿದೆ
- Advertisement -


LEAVE A REPLY

Please enter your comment!
Please enter your name here

Most Popular

Recent Comments