ನವದೆಹಲಿ : ಸಂಪುಟ ವಿಸ್ತರಣೆಯ ಬೆನಲ್ಲೇ ಬಿಜೆಪಿ ಅಸಮಾಧಾನ ಸ್ಪೋಟಗೊಂಡಿದೆ. ಅದ್ರಲ್ಲೂ ಯಡಿಯೂರಪ್ಪ ವಿರುದ್ದ ಮುನಿಸಿಕೊಂಡಿರುವ ರೇಣುಕಾಚಾರ್ಯ ನೂತನ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ಸಿ.ಪಿ.ಯೋಗೀಶ್ವರ್ ಅವರ ಮೇಲೆ ಪ್ರೀತಿಯಿದ್ದರೆ ಮಾತನಾಡಲಿ, ಅದನ್ನು ಬಿಟ್ಟು ಸಚಿವ ಸ್ಥಾನ ನೀಡಲು ಅವರೇನು ರಾಜ್ಯದ ಮುಖ್ಯಮಂತ್ರಿಯಾ ? ಇಲ್ಲಾ ವಕ್ತಾರರ ಎಂದು ಪ್ರಶ್ನಿಸಿದ್ದಾರೆ. ಸಿ.ಪಿ.ಯೋಗೀಶ್ವರ್ ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡವರು. ಅಂಥವರು ಬಿಜೆಪಿಯನ್ನು ಏನು ಬೆಳಸುತ್ತಾರೆ. ಯೋಗೀಶ್ವರ್ ಅವರ ಬಳಿಯಲ್ಲಿ ಎಷ್ಟು ಐಷಾರಾಮಿ ಕಾರುಗಳಿವೆ, ಅವರು ಬಂಗಲೆ ಆಸ್ತಿಯನ್ನು ಎಷ್ಟು ಖರೀದಿ ಮಾಡಿದ್ದಾರೆ ಎನ್ನುವುದರ ಬಗ್ಗೆ ಲೆಕ್ಕ ನನ್ನ ಬಳಿಯಲ್ಲಿದೆ. ಅದೆಲ್ಲವನ್ನೂ ರಾಷ್ಟ್ರೀಯ ನಾಯಕರಿಗೆ ನೀಡುತ್ತೇನೆ ಎಂದಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದೇ ಇರುವ ಕುರಿತು ಹಲವು ಶಾಸಕರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಅವರೆಲ್ಲರೂ ನನ್ನ ಬಳಿಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ವಾರ ನಾವೆಲ್ಲರೂ ಸಭೆ ಸೇರಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.