ಮಂಗಳೂರು(15-01-2021): ಪಾಕ್ ಪರ ಘೋಷಣೆಯ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.ಪ್ರತಿಭಟನೆಯಲ್ಲಿ ಮಾತನಾಡಿದ ಶಾಫಿ ಬೆಳ್ಳಾರೆ, ಪಾಕ್ ಪರ ಘೋಷಣೆ ಮಾಡಿದ್ದಾರೆಂದು ಸುಳ್ಳು ಆರೋಪಗಳನ್ನು ಮಾಡಿ ಬಂಧಿಸಿರುವ ಅಮಾಯಕ ಮುಸ್ಲಿಂ ಯುವಕರನ್ನು ಬಿಡುಗಡೆಗೊಳಿಸಬೇಕು. ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕು. ಕರ್ತವ್ಯ ಲೋಪ ಮಾಡಿದ ಬೆಳ್ತಂಗಡಿ ಇನ್ಸ್ ಪೆಕ್ಟರ್ ನಂದ ಕುಮಾರ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಶ್ರಪ್ ಮಾಚಾರ್, ಅಥಾವುಲ್ಲ ಜೋಕಟ್ಟೆ, ಆಲ್ಪ್ರಾನ್ಸೊ ಫ್ರಾಂಕೋ, ಆನಂದ್ ಮಿತ್ತಬೈಲ್ ಸೇರಿ ಹಲವು ಎಸ್ ಡಿಪಿಐ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ.ಪ್ರತಿಭಟನಾಕಾರರನ್ನು ಕ್ಲಾಕ್ ಟವರ್ ಬಳಿ ಬ್ಯಾರಿಕೇಡ್ ಇಟ್ಟು ಎಸ್ಪಿ ಕಚೇರಿಗೆ ತೆರಳದಂತೆ ಪೊಲೀಸರು ತಡೆದಿದ್ದು, ಧರಣಿ ಮುಂದುವರಿದಿದೆ
Recent Comments
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಮಂಗಳೂರಿನಲ್ಲೊಬ್ಬ ಸೋನು ಸೂದ್ : ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ. ಇ. ಒ ವಿವೇಕ್ ರಾಜ್ ಪೂಜಾರಿ
on
ದೇಶವಿದೇಶಗಳಲ್ಲಿ ವೈರಲ್ ಆಗುತ್ತಿದೆ ಈ ವೀಡಿಯೋ : ಅಂಬಾನಿ ತನ್ನ ಘನತೆಗಾಗಿ ದೇಶದ ಘನತೆಯನ್ನು ಕುಗ್ಗಿಸುತ್ತಿದ್ದಾರೋ…!
on