ಸೌದಿ ಅರೇಬಿಯಾ : ಅನಿವಾಸಿ ಕರಾವಳಿಗರು ಆಯೋಜಿಸುವ ಸಿಗ್ಮಾ ಚಾಂಪಿಯನ್ ಟ್ರೋಪಿ 2021 ಇದರ ಪ್ರಥಮ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಇಲ್ಲಿನ ಜುಬೈಲ್ ನಲ್ಲಿ ಇಂದು (ಜನವರಿ 15) ಪ್ರಾರಂಭವಾಗಿದೆ.ಪ್ರಾರಂಭಿಕ ಪಂದ್ಯಾವಳಿಯಲ್ಲಿ ಸೌದಿ ಅರೇಬಿಯಾದ ಬಲಿಷ್ಠ ತಂಡಗಳಲ್ಲಿ ಒಂದಾದ ಈಸ್ಟನ್ ಬ್ಲೂಸ್,ಅನ್ಸಾಫ್ ನಾಯಕತ್ವದಲ್ಲಿ HMR ಇಂಜಿನಿಯರ್ ತಂಡದ ವಿರುದ್ದ ಭರ್ಜರಿ 10 ವಿಕೆಟ್ ಜಯ ಸಾಧಿಸಿತು. ಕರ್ನಾಟಕ ಕರಾವಳಿಯ ಅದರಲ್ಲೂ ಪ್ರಮುಖವಾಗಿ ಮಂಗಳೂರಿನವರೇ ಭಾಗವಹಿಸುವ ಈ ಪಂದ್ಯಾಕೂಟವು ಸೌದಿಯಲ್ಲಿ ಹೊಸ ಉಲ್ಲಾಸ ಮೂಡಿಸಿದೆ.ಈ ಪಂದ್ಯಾಟಕ್ಕೆ ಭಾರೀ ಪ್ರೋತ್ಸಾಹ ದೊರೆತಿದೆ.
ಸಿಗ್ಮಾ ಚಾಂಪಿಯನ್ ಟ್ರೋಫಿಯ ಫೈನಲ್ ವಿಜೇತ ತಂಡಕ್ಕೆ 44 ಗ್ರಾಂ ಚಿನ್ನ ದ್ವಿತೀಯ ತಂಡಕ್ಕೆ 22 ಗ್ರಾಂ ಚಿನ್ನ ಪ್ರಶಸ್ತಿ ದೊರೆಯಲಿದೆ.ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಬಜಾಜ್ ಬೈಕ್ ಹಾಗೂ ಎಲ್ಲಾ ಪಂದ್ಯಾವಳಿಯ ಪಂದ್ಯ ಶ್ರೇಷ್ಠ ಆಟಗಾರರಿಗೆ ಸ್ಮಾರ್ಟ್ ವಾಚ್ ಪ್ರಶಸ್ತಿ ಲಭಿಸಲಿದೆ.