Saturday, September 30, 2023
Homeಕರಾವಳಿಮಕ್ಕಳ ಅಪಹರಣ: ಮೂವರು ಆರೋಪಿಗಳ ಬಂಧನ

ಮಕ್ಕಳ ಅಪಹರಣ: ಮೂವರು ಆರೋಪಿಗಳ ಬಂಧನ

- Advertisement -Renault

Renault
Renault

- Advertisement -

ಮಂಗಳೂರು: ಮಕ್ಕಳ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನು ಆಧರಿಸಿ 3 ಮಂದಿಯನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಕ್ಷಿತ್ ಶೆಟ್ಟಿ, ರಾಹುಲ್ ಸಿನ್ಹಾ, ಅಲಿಸ್ಟಾರ್ ಎಂಬುವರನ್ನು ಬಂಧನ ಮಾಡಲಾಗಿದೆ. ಈ ಮೂವರು ಮಕ್ಕಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಅಪಹರಣ ಮಾಡಲು ಯತ್ನಿಸಿದ್ದು, ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಭಾಗಿ ಆಗಿರುವ ಮೂವರ ವಿರುದ್ದ ಹಿಂದೆ ಕೂಡ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.

ಡ್ರಗ್ ಪ್ರಕರಣಗಳಲ್ಲಿ ಕೂಡ ಇವರು ಇದ್ದಾರೆ. ಪ್ರಕರಣದ ಪತ್ತೆಗೆ ತಂಡವನ್ನು ರಚನೆ ಮಾಡಲಾಗಿತ್ತು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.

ಉಳ್ಳಾಲದಲ್ಲಿ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧನ ಮಾಡಲಾಗಿದೆ.ಆರೋಪಿ ನಾಗರಾಜ ಎಂದು ಗುರುತಿಸಲಾಗಿದೆ. ಮಾಂಸವನ್ನು ಹೆಚ್ಚಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿಸಿದರು. ಡಿಸಿಪಿ ಹರಿರಾಮ್ ಶಂಕರ್ ಇದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments