Saturday, June 3, 2023
Homeರಾಜಕೀಯಇದೀಗ ಶುರುವಾಗಿದೆ 'ಗಾಲಿಯಲ್ಲಿ ರೆಡ್ಡಿ ಗುದ್ದಾಟ'

ಇದೀಗ ಶುರುವಾಗಿದೆ ‘ಗಾಲಿಯಲ್ಲಿ ರೆಡ್ಡಿ ಗುದ್ದಾಟ’

- Advertisement -


Renault

Renault
Renault

- Advertisement -

ಬಳ್ಳಾರಿ : ಇಷ್ಟು ದಿನ ಸೈಲೆಂಟ್ ಆಗಿದ್ದ ಗಾಲಿ ಕರುಣಾಕರ ರೆಡ್ಡಿ ಸಂಕ್ರಾಂತಿ ಬಳಿಕ ಪ್ರಕಾಶಿಸುತ್ತಿದ್ದಾರೆ. ಬಿಜೆಪಿಯಲ್ಲಿ ಇದ್ದರೂ ಇಲ್ಲದಂತಿದ್ದ ಕರುಣಾಕರ ರೆಡ್ಡಿ ‘ಕಳೆದ 26 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ, ಆದರೆ ಸಚಿವ ಸ್ಥಾನ ನೀಡದಿರುವುದಕ್ಕೆ ಬೇಸರವಿಲ್ಲ’ ಎಂದು ಹೇಳುವ ಮೂಲಕ ರಾಜಕೀಯ ಮುನ್ನಲೆಗೆ ಬಂದಿದ್ದಾರೆ.ಬಳ್ಳಾರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಯಾವುದೇ ಸರ್ಕಾರದಲ್ಲಾದರೂ ಎಷ್ಟು ಬಾರಿ ಸಚಿವ ಸಂಪುಟ ವಿಸ್ತರಣೆಯಾದರೂ ಅಸಮಾಧಾನ ಕಾಮನ್ ಆಗಿದೆ. ಇದು ನಿರಂತರ ಪ್ರಕ್ರಿಯೆ. ಇದೀಗ ನಮ್ಮ ಸರ್ಕಾರದಲ್ಲೂ ಅದೇ ಸಮಸ್ಯೆಯಾಗಿದೆ. ಎಲ್ಲರನ್ನೂ ಸಮಾಧಾನ ಪಡಿಸಲು ಯಾರಿಂದಲು ಸಾಧ್ಯವಿಲ್ಲ. ಅಸಮಾಧಾನಿತರ ಪಕ್ಷ ವಿರೋಧಿ ಹೇಳಿಕೆಗಳು ಅವರ ವೈಯಕ್ತಿಕ ವಿಚಾರ.ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments