ನಾರ್ವೆ: ವಯೋವೃದ್ಧರು ಮತ್ತು ತೀವ್ರ ಅಸ್ವಸ್ಥರು ಕೋವಿಡ್-19 ಲಸಿಕೆ ಪಡೆಯುವುದು ಅಪಾಯಕಾರಿ ಎಂದು ನಾರ್ವೆ ಸರಕಾರ ಅಧಿಕೃತವಾಗಿ ಪ್ರಕಟಿಸಿದೆ.ಮೊದಲ ಹಂತದ ಲಸಿಕೆ ಪಡೆದ ಅಲ್ಪಾವಧಿಯಲ್ಲೇ ದೇಶದಲ್ಲಿ 23 ಮಂದಿ ಮೃತಪಟ್ಟ ಬೆನ್ನಲ್ಲೇ ಸರಕಾರ ಈ ಎಚ್ಚರಿಕೆ ನೀಡಿದೆ. ಕೋವಿಡ್ ಲಸಿಕೆಯ ವಾಸ್ತವ ಅಡ್ಡ ಪರಿಣಾಮಗಳ ಬಗ್ಗೆ ಅಂದಾಜಿಸುತ್ತಿರುವ ಹಂತದಲ್ಲೇ ಯೂರೋಪಿಯನ್ ದೇಶ ಈ ಹೇಳಿಕೆ ನೀಡಿದೆ.ದೇಶದಲ್ಲಿ ಮೃತಪಟ್ಟ 23 ಮಂದಿಯ ಪೈಕಿ 13 ಮಂದಿಯ ಅಟಾಪ್ಸಿ ನಡೆಸಿದಾಗ, ವೃದ್ಧರಲ್ಲಿ ತೀವ್ರತರದ ಅಡ್ಡ ಪರಿಣಾಮಗಳಿಗೆ ಲಸಿಕೆ ಕಾರಣವಾಗಿದೆ ಎನ್ನುವುದು ತಿಳಿದುಬಂದಿದ್ದಾಗಿ ನಾರ್ವೆಯ ಔಷಧ ಏಜೆನ್ಸಿ ಪ್ರಕಟಿಸಿದೆ.ಯುವಕರು ಮತ್ತು ಆರೋಗ್ಯವಂತರು ಲಸಿಕೆ ಪಡೆದುಕೊಳ್ಳಬಾರದು ಎನ್ನುವುದು ಇದರ ಅರ್ಥವಲ್ಲ. ಆದರೆ ಲಸಿಕೆ ನೀಡಿಕೆ ಬಗ್ಗೆ ಸುರಕ್ಷತಾ ಕಣ್ಗಾವಲಿನಲ್ಲಿ ಯಾವ ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ ಎನ್ನುವುದರ ಆರಂಭಿಕ ಸೂಚನೆಯಾಗಿದೆ.
Recent Comments
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಮಂಗಳೂರಿನಲ್ಲೊಬ್ಬ ಸೋನು ಸೂದ್ : ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ. ಇ. ಒ ವಿವೇಕ್ ರಾಜ್ ಪೂಜಾರಿ
on
ದೇಶವಿದೇಶಗಳಲ್ಲಿ ವೈರಲ್ ಆಗುತ್ತಿದೆ ಈ ವೀಡಿಯೋ : ಅಂಬಾನಿ ತನ್ನ ಘನತೆಗಾಗಿ ದೇಶದ ಘನತೆಯನ್ನು ಕುಗ್ಗಿಸುತ್ತಿದ್ದಾರೋ…!
on