ಮಂಗಳೂರು: ನಗರದ ಚಿಕ್ಕ ಜಾಗದಲ್ಲಿ ಹಿರಿದಾದ ವಸತಿ / ವಾಣಿಜ್ಯ ಸಂಕೀರ್ಣಕ್ಕೆ ಕೊಡುವ ಪರವಾನಿಗೆಯಿಂದ ಸ್ಮಾರ್ಟ್ ಸಿಟಿ ಯೋಜನೆಯು ಸಮಸ್ಯೆಯ ಆಗರವಾಗುತ್ತಿದೆ. ನೀರು ಸರಬರಾಜು ನಿಂತಾಗ , ವಸತಿ ಕಟ್ಟಡಕ್ಕೆ ಅಚಾನಕಾಗಿ ನೀರಿನ ಟ್ಯಾಂಕರ್ ತರಿಸಬೇಕಾಗಿ ಬಂತು. ಅದಾಗಲೇ ಇದರ ಪ್ರವೇಶ ದ್ವಾರದ ಓಳಗೆ ದೊಡ್ಡದಾದ ವಾಹನ ಪ್ರವೇಶ ಸಾಧ್ಯವಿಲ್ಲ ಅನ್ನುವುದು ತಿಳಿದುಬಂತು. ಹಾಗಾದರೆ ನಮ್ಮ ಕಟ್ಟಡದಲ್ಲಿ ಬೆಂಕಿ ಬಿದ್ದರೆ ಅಗ್ನಿಶಾಮಕ ವಾಹನ ಒಂದು ಸುತ್ತು ಬರುವುದಾದರೂ ಹೇಗೆ?. ಅನಾರೋಗ್ಯ ಪೀಡಿತರಾದಾಗ ಆಂಬ್ಯುಲೆನ್ಸ್ ಬರಲೂ ಅಸಾಧ್ಯ. ಇವುಗಳಿಗೆ ಅನುಮತಿಯನ್ನು ದೊರಕಿಸಿಕೊಟ್ಟ ಕನಿಷ್ಠ ಜ್ಞಾನ ಇಲ್ಲದ ಅಧಿಕಾರಿಗಳನ್ನು, ಮುಗ್ದ ಜನರು ಇರುವ ಮಂಗಳೂರಿನಿಂದ ವರ್ಗಾವಣೆ ಮಾಡಬೇಕಾಗಿದೆ.
ಮಹಾನಗರ ಪಾಲಿಕೆ ಟೌನ್ ಪ್ಲಾನಿಂಗ್ ಕಾಯಿದೆ , ನಗರಾಭಿವೃದ್ಧಿ ಪ್ರಾಧಿಕಾರದ ಕಾನೂನು ,ಸ್ಮಾರ್ಟ್ ಸಿಟಿ ಯೋಜನೆ ಓದಿ ಅರ್ಥೈಸಿದಾಗ ಕೆ.ಎಸ್ ರಾವ್ ರಸ್ತೆಯಲ್ಲಿ ಇರುವ ಓಂದು ವಸತಿ ಗೃಹ (ಹಳೇ ಬಸ್ ಸ್ಟಾಂಡ್ ಎದುರು) ಇದು ಪಕ್ಕದ ಕಟ್ಟಡದ ಮೇಲೆಯೇ ಇದೆ .ಇನ್ನು ಬಂಟ್ಸ್ಹಾಸ್ಟೆಲ್ ವೃತ್ತದಲ್ಲಿ ಇರುವ ಎಕ್ಸಲ್ ಸೆಂಟರ್ನ ಭಾಗದಲ್ಲಿ ನೋಡಿದಾಗ ಅಧಿಕಾರಿಗಳು ಕಾನೂನನ್ನು ಕಸದ ಬುಟ್ಟಿಗೆ ಹಾಕಿದಂತೆ ಕಾಣುತ್ತಿದೆ . ಕಟ್ಟಡ ಕಟ್ಟುವಾಗ ಬಹುಮಹಡಿ ಕಟ್ಟಡದ ಸುತ್ತಾ ತುರ್ತು ವಾಹನಕ್ಕೆ ಸರಾಗವಾಗಿ ಪ್ರವೇಶಕ್ಕೆ ಜಾಗ ಇರಬೇಕು . ಇದನ್ನು ಪರಿಶೀಲಿಸಿ ಮನಪಾ ಅಧಿಕಾರಿಗಳು ಓಪ್ಪಿಸಿದ ಮೂಲ ಕಟ್ಟಡದ ನಕ್ಷೆಗೆ ಅನುಗಣವಾಗಿ ಇದೆಯಾ? ಎಂದು ನೋಡಿ ಆಮೇಲೆ ಪ್ರವೇಶ ಅನುಮತಿ ನೀಡಬೇಕು. ಆದರೆ ನಾವು ಗಮನಿಸಿದಾಗ ಮೂಲ ನಕ್ಷೆ ಹಾಗು ಕಟ್ಟಡ ಕಟ್ಟಿರುವುದಕ್ಕೆ ಅಜಗಜಾಂತರ ವ್ಯತ್ಯಾಸ ಇದೆ.
ಇದು ಒಂದು ಎರಡು ಕಟ್ಟಡದಲ್ಲ, ಸರಸಾಗಟವಾಗಿ ವಿದ್ಯಾ ಸಂಸ್ಥೆಗಳು, ಆಸ್ಪತ್ರೆ, ವಸತಿ ಸಮುಚ್ಛಯ ಬಹುಮಹಡಿ ವಾಣಿಜ್ಯ ಮಳಿಗೆಗಳು ಎಲ್ಲದರಲ್ಲೂ ಇದೇ ಅವಾಂತರ. ಇನ್ನು ಹೆಚ್ಚಿನ ಕಟ್ಟಡದಲ್ಲಿ ನೆಲಮಾಳಿಗೆಯಲ್ಲಿ ಜನರೇಟರ್ ಅಥವಾ ಸಂಪ್ ಇದ್ದರೆ, ಅಲ್ಲೇನಾದರೂ ಅವಘಡಗಳು ಸಂಭವಿಸಿದಲ್ಲಿ ಇಲ್ಲಿ ವಾಹನಗಳು ತಲುಪಲು ಅಸಾಧ್ಯವಾಗಿರುತ್ತದೆ. ಕಾರಣ ನೆಲದಿಂದ ಎತ್ತರ ಈ ಭಾಗಗಳಲ್ಲಿ ಕೇವಲ ಅರು ಅಡಿ ಮಾತ್ರ. ಪಿಲ್ಲರ್ ಎತ್ತರ ಹೋದರೆ ಖರ್ಚು ಜಾಸ್ತಿಯಾಗುವುದು ಅನ್ನುವ ಉದ್ದೇಶದಿಂದ ಹಣ ಉಳಿಸಲು ಬಿಲ್ಡರ್ಗಳು ನಡೆಸುತ್ತಿರುವ ದೊಡ್ಡ ಆವಾಂತರ . ಇನ್ನು ಬಹುಮಹಡಿ ಕಟ್ಟಡಕ್ಕೆ ಒಳಚರಂಡಿ ವ್ಯವಸ್ಥೆ ಇರದೇ ವಾಸಿಸಲು ಅನುಮತಿ ಕೊಟ್ಟ ಘಟನೆ ಸುರತ್ಕಲ್ನಲ್ಲಿ ಇತ್ತೀಚೆಗೆ ನಡೆದಿದೆ. ಅನಂತರ ತ್ಯಾಜ್ಯ ರಸ್ತೆಯಲ್ಲಿ ತುಂಬಿ ತುಳುಕಿದ ಮೇಲೆ ಅರೆಬರೆ ಸ್ಥಿತಿಯಲ್ಲಿ ಇರುವ ಓಳಚರಂಡಿಗೆ ಸಂಪರ್ಕ ನೀಡಲಾಯಿತು. ಹಾಗಾದರೆ ಇದರಲ್ಲಿ ವಸತಿ ಖರೀದಿಸಿದ ಮಾಹಾಶಯರು ಮೂರ್ಖರಾ! ಅಥವಾ ಇದನ್ನು ಕಟ್ಟಸಿದ ಬಿಲ್ಡರ್ ಕೋಡಂಗಿನಾ ಅನ್ನುವ ಸಂಶಯ ಏಳುವುದು ಸಹಜ. ಬಹುಷಃ ಮಂಗಳೂರು ಮಹಾನಗರ ಪಾಲಿಕೆಯ ಮತ್ತು ಮುಡಾ ಅಧಿಕಾರಿಗಳು ಕುರುಡರು ಆಗಿರಬೇಕು .ನಮ್ಮ ನಾಗರಿಕರಿಗೆ ವಾಸಿಸಲು ವಸತಿ/ ಅಥವಾ ವಹಿವಾಟಿಗೆ ಅಂಗಡಿ ಬೇಕು. ಇದಕ್ಕೆ ಅನುಮತಿ ಮುನ್ನ ಈ ಕಟ್ಟಡದ ನೂನ್ಯತೆ,ನಿಯಾಮಾವಾಳಿಗಳ ಪರಿಪಾಲನೆ ಅಗಿದೆಯೇ ? ಅನ್ನುವ ಕನಿಷ್ಠ ಸಮಯ ಪ್ರಜ್ಞೆ ಇಲ್ಲ. ಇನ್ನು ಹಣದಾಸಗೆ 10 ಸೆಂಟ್ಸ್ ಜಾಗದಲ್ಲಿ 10 ಸೆಂಟ್ಸ್ ಭರ್ತಿ ಕಟ್ಟಡ ಕಟ್ಟುವ ಬಕಾಸುರ ಬಿಲ್ಡರುಗಳು, ಅವರ ಎಂಜಲು ಅನ್ನ ತಿನ್ನುವ ಅಧಿಕಾರಿಗಳು ಇರುವಾಗ ನಮ್ಮ ನಗರದಲ್ಲಿ ಸುವ್ಯವಸ್ಥೆ ಬರುವುದು ಯಾವಾಗ?.ನಾವು ಇದನ್ನು ಸ್ಮಾರ್ಟ್ ಸಿಟಿ ಎನ್ನುತ್ತೇವೆ, ಅಲ್ಲ ಸ್ಮಾರಕ ಸಿಟಿ ಯಂತೆ ಇದೆಯೇ ? ಎಂದು ಸ್ಥಳ ತನಿಖೆ ಮಾಡಿ ಮುಗ್ದ ಮಂಗಳೂರಿಗರಿಗೆ ಸ್ಮಾರ್ಟ್ ಸಿಟಿ ಯೋಜನೆ ಅಧ್ಯಕ್ಷ ಪೊನ್ನುರಾಜ್ ಸುದ್ಧಿಗೋಷ್ಠಿ ಕರೆದು ಉತ್ತರಿಸಬೇಕಾಗಿದೆ