Saturday, June 3, 2023
Homeಕ್ರೈಂಹದಿನೇಳರ ಹುಡುಗಿಯ ಸ್ವಂತ ತಂದೆಯಿಂದಲೇ ಮಗು ಜನನ!

ಹದಿನೇಳರ ಹುಡುಗಿಯ ಸ್ವಂತ ತಂದೆಯಿಂದಲೇ ಮಗು ಜನನ!

- Advertisement -


Renault

Renault
Renault

- Advertisement -

ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಯುವತಿಯೊಬ್ಬಳು ತನ್ನ ತಂದೆಯಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ.17 ವರ್ಷದ ಪುತ್ರಿಯ ಮೇಲೆ ಮದ್ಯವ್ಯಸನಿಯಾಗಿದ್ದ ತಂದೆ ಪದೇಪದೇ ಅತ್ಯಾಚಾರ ಎಸಗುತ್ತಿದ್ದ ಎಂದು ದೂರಲಾಗಿದೆ. ಪಾಪನಾಶಂ ಮೂಲದವನಾದ ಆರೋಪಿಗೆ 2003 ರಲ್ಲಿ ಹೆಣ್ಣು ಮಗು ಜನಿಸಿದ್ದು, ಆತನ ಪತ್ನಿ ಮೃತಪಟ್ಟಿದ್ದಾಳೆ. ಮಗು ಅಜ್ಜಿಮನೆಯಲ್ಲಿ ಬೆಳೆದಿದೆ.ಪತ್ನಿ ನಿಧನದ ನಂತರ ಮುಂಬೈಗೆ ಸ್ಥಳಾಂತರಗೊಂಡಿದ್ದ ಆರೋಪಿ ಅಲ್ಲಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಆರೋಪಿ ತನ್ನ ಎರಡನೇ ಪತ್ನಿ ಮತ್ತು ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಮರಳಿದ್ದಾನೆ.2020 ರ ಏಪ್ರಿಲ್ ನಲ್ಲಿ ಆತನ ಎರಡನೇ ಪತ್ನಿಯೊಂದಿಗೆ ಜಗಳವಾಗಿ ಬೇರೆಯಾಗಿದ್ದಾರೆ.

ಅಕ್ಕಿ ಗಿರಣಿಯಲ್ಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡ ಆರೋಪಿ ಅಜ್ಜಿ ಮನೆಯಲ್ಲಿದ್ದ ಮೊದಲ ಪತ್ನಿ ಮಗಳನ್ನು ಕರೆದುಕೊಂಡು ಬಂದಿದ್ದಾನೆ. ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ಆರೋಪಿ ತನ್ನ 17 ವರ್ಷದ ಪುತ್ರಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಪದೇಪದೇ ಅತ್ಯಾಚಾರ ಎಸಗಿದ್ದು ಪುನರಾವರ್ತಿತ ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿದ್ದ ಬಾಲಕಿ ಅಜ್ಜಿ ಮನೆಗೆ ತೆರಳಿದ್ದಾಳೆ. ಜನವರಿ 11 ರಂದು ಪಾಪನಾಶಂ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಮಕ್ಕಳ ಕಲ್ಯಾಣ ಕಚೇರಿ ಅಧಿಕಾರಿಗಳು ಹುಡುಗಿಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments