ಯಾರೋ ಹೇಳಿದ ಮಾತು ಕಾಂಗ್ರೆಸ್ ಯುಗ ಮುಗಿಯಿತು.
ಕಾಂಗ್ರೆಸ್ ಯುಗ ಮುಗಿದಿಲ್ಲಾ ಅನ್ನೊದು ಪಂಚಾಯತ್ ಚುನಾವಣಾ ಫಲಿತಾಂಶ. ಕಾಂಗ್ರೆಸ್ ನ ಕೆಲವು ನಾಯಕರ ಅಹಂಕಾರ ಹಾಗೂ ಅಸಡ್ಡತನ ಬೆಂಬಲಿಗರಿಗೆ ಮಾತ್ರ ಅವಕಾಶ ಇದರಿಂದ ಕಾಂಗ್ರೆಸ್ ಹೊರ ಬರ ಬೇಕಾಗಿದೆ. ರಾಜ್ಯ ಹಾಗೂ ರಾಷ್ಟ್ರನಾಯಕರು ಚಿಂತಿಸ ಬೇಕಾಗಿದೆ. ಜಿಲ್ಲಾ ನಾಯಕತ್ವ ಹಾಗೂ ಕಾರ್ಯಕರ್ತರ ಜೊತೆ ರಾಷ್ಟ್ರ ಹಾಗೂ ರಾಜ್ಯದ ಉನ್ನತ ನಾಯಕರು ಸಮಾಲೋಚನೆ ನಡೆಸಬೇಕು. ಪ್ರತಿಜ್ಞಾ ದಿನದ ಆ ವರ್ಚಸ್ಸು ಇಲ್ಲಾದಾಗಿದೆ. ಕಾರ್ಯಕರ್ತರನ್ನು ಹುರಿದುಂಬಿಸ ಬೇಕಾದ ರಾಜ್ಯದ ಕೆಲವು ನಾಯಕರು ತಮ್ಮ ಉನ್ನತ ನಾಯಕರಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ.
ಯುವ ನಾಯಕತ್ವದ ಪ್ರಶ್ನೆ ಪಕ್ಷದ ಮುಂದಿದೆ. ಯಾವ ಜಿಲ್ಲೆ ಕಾಂಗ್ರೆಸ್ ಪ್ರಾಬಲ್ಯ ಕಳಕೊಂಡಿದೆಯೋ ದಯವಿಟ್ಟು ಆ ಜಿಲ್ಲೆಯ ಯುವ ನಾಯಕರನ್ನು ರಾಜ್ಯಕ್ಕೆ ತಂದು ರಾಜ್ಯದಲ್ಲಿ ಪಕ್ಷವನ್ನು ಮಂಕಾಗಿಸ ಬೇಡಿ. ಬದಲಾಗಿ ಅಂತಹ ಯುವಕರಿಗೆ ಅವರ ಜಿಲ್ಲೆಯಲ್ಲಿ ಪಕ್ಷ ಪ್ರಭಲವಾಗಲು ಹುರಿದುಂಬಿಸಿ. ಯಾವ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿದೆಯೋ ಜಾತಿ ನೋಡದೆ ಅಂತಹ ಯುವಕರನ್ನು ರಾಜ್ಯಕ್ಕೆ ನಾಯಕರಾಗಿ ಆಯ್ಕೆ ಮಾಡಿ. ಕಂಡಿತ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಪ್ರಬಲವಾಗಲಿದೆ. ಚಿಂತಿಸಿ ಯುವ ನಾಯಕತ್ವದ ಬಗ್ಗೆ.
ಯಾವ ನಾಯಕರು ಉತ್ತಮ ಪಲಿತಾಂಶ ತಂದಿಲ್ಲವೋ. ಅಂತವರಿಗೆ ಪದೇ ಪದೇ ಅವಕಾಶ ಕೊಡ ಬೇಡಿ. ಪಕ್ಷದ ಉನ್ನತ ಹುದ್ದೆಯಿಂದ ಹಿಂದೆ ಸರಿಸಿ.
ಕಾಂಗ್ರೆಸ್ ಪಕ್ಷದ ಈಗಿನ ರಾಜ್ಯ ಅಧ್ಯಕ್ಷರು ಚುರುಕಾಗಿದ್ದಾರೆ. ಅವರಿಗೆ ಪಕ್ಷದ ಬೇರೆ ನಾಯಕರ ಬೆಂಬಲ ಅವಶ್ಯ. ಅವರ ಡೈನಾಮಿಕ್ ಸ್ಟೈಲ್ ಯುವಕರಿಗೆ ಕಾರ್ಯಕರ್ತರಿಗೆ ಹುರಿದುಂಬಿಸುವಂತದೇ . ಅದರ ಜೊತೆ ಕಾರ್ಯದ್ಯಕ್ಷರುಗಳೂ ಉತ್ತಮ ಕೆಳಸ ಮಾಡುತ್ತಿದ್ದಾರೆ ಈ ಟೀಮ್ ಗೆ ಪಕ್ಷದ ಒಳಗಿಂದ ಬೆಂಬಲದ ಅವಶ್ಯಕತೆ ಇದೆ.
ಇಕ್ಬಾಲ್ ಕಾವೂರು
ಅನಿವಾಸಿ ಭಾರತೀಯ ಕಾಂಗ್ರೆಸ್
ರಾಷ್ಟ್ರೀಯ ಉಸ್ತುವರಿ
KSA