Tuesday, June 6, 2023
Homeಕರಾವಳಿಉಕ್ಕು ಆಧರಿತ ಉದ್ಯಮಕ್ಕೆ ಬೆಲೆಯೇರಿಕೆ ತೀವ್ರ ಹೊಡೆತ: ಮನ್ಸೂರ್ ಅಹಮದ್ ಅಜಾದ್

ಉಕ್ಕು ಆಧರಿತ ಉದ್ಯಮಕ್ಕೆ ಬೆಲೆಯೇರಿಕೆ ತೀವ್ರ ಹೊಡೆತ: ಮನ್ಸೂರ್ ಅಹಮದ್ ಅಜಾದ್

- Advertisement -


Renault

Renault
Renault

- Advertisement -

ಮಂಗಳೂರು: ಕೋವಿಡ್ ದಿಂದ ಸ್ವಲ್ಪ ಕಾಲ ಹಿನ್ನಡೆ ಅನುಭವಿಸಿದ್ದ ರಿಯಲ್‌ ಎಸ್ಟೇಟ್‌ ಕ್ಷೇತ್ರ ಚೇತರಿಕೆಯಲ್ಲಿದ್ದರೂ ಈಗ ತೀವ್ರ ಗತಿಯಲ್ಲಿ ಏರುತ್ತಿರುವ ಉಕ್ಕಿನ ಬೆಲೆ ಗಾಯದ ಮೇಲೆ ಬರೆ ಎಳೆದಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರತೀ ತಿಂಗಳು 10 ಸಾವಿರ ಟನ್‌ಗಳಿಗೂ ಅಧಿಕ ಉಕ್ಕು ನಿರ್ಮಾಣ ಕ್ಷೇತ್ರಕ್ಕೆ ಸರಬರಾಜು ಆಗುತ್ತದೆ. ನಾಲ್ಕು ತಿಂಗಳ ಹಿಂದೆ ಕಿಲೋ ಉಕ್ಕಿಗೆ 42 ರೂ. ಇದ್ದುದು ಈಗ ಶೇ. 35ರಷ್ಟು ಏರಿದ್ದು, 60 ರೂ. ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಿಲೋಗೆ 40ರಿಂದ 42 ರೂ. ವರೆಗೆ ಇತ್ತು. ಬೆಲೆಯೇರಿಕೆ ಮತ್ತಿತರ ಕಾರಣಗಳಿಂದ ಪೂರೈಕೆ ಕೊರತೆಯೂ ತಲೆದೋರಿದೆ. ಇದೇ ಪರಿಸ್ಥಿತಿ ಇನ್ನಷ್ಟು ಸಮಯ ಮುಂದುವರಿಯಲಿದ್ದು, ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ವರ್ತಕರು ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ಕ್ಷೇತ್ರ ಜುಲೈಯಿಂದ ಈಚೆಗೆ ಚೇತರಿಸಿಕೊಳ್ಳುತ್ತಿರುವ ಸಂದರ್ಭ ಸುಮಾರು 6 ತಿಂಗಳ ಕಾಲ ಮರಳು ಸಮಸ್ಯೆ ತೀವ್ರವಾಗಿತ್ತು. ಅದು ಬಗೆಹರಿದು ನಿರ್ಮಾಣ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿದ್ದಂತೆ ಉಕ್ಕಿನ ಬೆಲೆಯೇರಿಕೆಯ ಹೊಡೆತ ಎದುರಾಗಿದೆ. ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ 75ಕ್ಕೂ ಅಧಿಕ ಬಹುಅಂತಸ್ತು ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದೆ. ಸಾಕಷ್ಟು ಮನೆಗಳ ನಿರ್ಮಾಣವೂ ನಡೆಯುತ್ತಿದೆ.18 ರೂ. ಏರಿಕೆ, ಶೇ. 50 ಪೂರೈಕೆ :‌ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಉಕ್ಕಿನ ಬೆಲೆಯಲ್ಲಿ ಕಿಲೋಗೆ 18 ರೂ. ಏರಿಕೆಯಾಗಿದೆ. ಸರಬರಾಜು ಇಳಿಮುಖವಾಗಿದ್ದು, ಬೇಡಿಕೆಯ ಶೇ. 50ರಷ್ಟು ಮಾತ್ರ ಪೂರೈಕೆ ಆಗುತ್ತಿದೆ. ಬೆಲೆ ಇನ್ನಷ್ಟು ಏರುವ ಸಾಧ್ಯತೆಗಳಿವೆ ಎಂದು ಮಂಗಳೂರಿನ ಪ್ರಮುಖ ಉಕ್ಕು ಮಾರಾಟಗಾರ ಮನೋಜ್‌ ಸರಿಪಲ್ಲ ವಿವರಿಸಿದ್ದಾರೆ.ಕಬ್ಬಿಣದ ಅದಿರು ಸಹಿತ ಕಚ್ಚಾ ಸಾಮಗ್ರಿಗಳ ಕೊರತೆ ಇದ್ದು, ಅವುಗಳ ಬೆಲೆ ಭಾರೀ ಏರಿಕೆಯಾಗಿದೆ. ಇದರಿಂದ ಉತ್ಪಾದನ ವೆಚ್ಚದಲ್ಲೂ ಹೆಚ್ಚಳವಾಗಿದ್ದು, ದರ ಏರಿಕೆ ಅನಿವಾರ್ಯವಾಗಿದೆ ಎಂಬುದಾಗಿ ಇಂಡಿಯನ್‌ ಅಸೋಸಿಯೇಶನ್‌ ಹೇಳಿದೆ.ಉಕ್ಕಿನ ಬೆಲೆ ನಿರಂತರ ಏರುತ್ತಿದೆ. ಪೂರೈಕೆಯೂ ಸಾಕಷ್ಟು ಪ್ರಮಾಣದಲ್ಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಸುಮಾರು ಶೇ. 35ರಷ್ಟು ಏರಿದ್ದು, ಇನ್ನಷ್ಟು ಏರುವ ಸಾಧ್ಯತೆಗಳಿವೆ. ರಿಯಲ್‌ಎಸ್ಟೇಟ್‌ ಸಹಿತ ಸೇರಿದಂತೆ ಉಕ್ಕು ಅಧಾರಿತ ಉದ್ಯಮಗಗಳಿಗೆ ಇದರಿಂದ ತೀವ್ರ ಸಮಸ್ಯೆಗಳು ಎದುರಾಗಿದೆ.– ಮನ್ಸೂರು ಅಹಮ್ಮದ್‌ ಅಜಾದ್‌,ಅಧ್ಯಕ್ಷರು ದ. ಕನ್ನಡ, ಉಡುಪಿ ಸ್ಟೀಲ್‌ ಟ್ರೇಡರ್ ಅಸೋಸಿಯೇಶನ್‌ ಕೊರೊನಾ ಬಳಿಕ ಚೇತರಿಕೆಯತ್ತ ಸಾಗುತ್ತಿರುವ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಉಕ್ಕಿನ ಬೆಲೆ ಏರಿಕೆ ಮತ್ತಷ್ಟು ಹೊಡೆತ ನೀಡಿದೆ. ಕ್ಷೇತ್ರ ಈಗಾಗಲೇ ಸಿಮೆಂಟ್‌ ಸೇರಿದಂತೆ ಕೆಲವು ಸಾಮಗ್ರಿಗಳ ಬೆಲೆಯೇರಿಕೆ, ಕೆಂಪುಕಲ್ಲಿನ ಕೊರತೆ ಎದುರಿಸುತ್ತಿದೆ. ಉಕ್ಕು ದರ ಏರಿಕೆ ಇನ್ನಷ್ಟು ಹೊಡೆತ ನೀಡಲಿದೆ.– ನವೀನ್‌ ಕಾರ್ಡೊಜಾ, ಅಧ್ಯಕ್ಷರು ಕ್ರೆಡೈ ಮಂಗಳೂರು

- Advertisement -

LEAVE A REPLY

Please enter your comment!
Please enter your name here

Most Popular

Recent Comments