ಸ್ಯಾಮ್‌ಸಂಗ್‌ನ ಮುಖ್ಯಸ್ಥ ಜೇ ವೈ.ಲೀ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಸ್ಮಾರ್ಟ್ ಫೋನ್ ಹಾಗೂ ಮೆಮೊರಿ ಚಿಪ್ ತಯಾರಿಸುವ ಜಗತ್ತಿನ ಅತಿ ದೊಡ್ಡ ಸಂಸ್ಥೆ ಸ್ಯಾಮ್‌ಸಂಗ್‌ನ ಮುಖ್ಯ ಸ್ಥಾನದಲ್ಲಿರುವ ಜೇ ವೈ.ಲಿಗೆ ದಕ್ಷಿಣ ಕೊರಿಯಾ ಕೋರ್ಟ್ ಸೋಮವಾರ 30 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷೆ ಪಾರ್ಕ್ ಗುನ್ ಹೇ ಅವರ ಸಹಚರರಿಗೆ ಲಂಚ ನೀಡಿದ ಪ್ರಕರಣದಲ್ಲಿ 2017ರಲ್ಲಿ ಲೀಗೆ ಐದು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಲೀ ಆರೋಪವನ್ನು ಒಪ್ಪಿಕೊಂಡಿರಲಿಲ್ಲ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಿ, ಒಂದು ವರ್ಷದ ಜೈಲು ಶಿಕ್ಷೆಯ ಬಳಿಕ ಬಿಡುಗಡೆಯಾಗಿದ್ದರು.ಸುಪ್ರೀಂ ಕೋರ್ಟ್ ಪ್ರಕರಣವನ್ನು ಸೋಲ್ ಹೈಕೋರ್ಟ್‌ಗೆ ವಾಪಸ್ ಕಳುಹಿಸಿತ್ತು. ಲಂಚ ನೀಡಿಕೆ, ಹಣ ದುರುಪಯೋಗ ಹಾಗೂ ಮರೆ ಮಾಚುವಿಕೆಗೆ ಸಂಬಂಧಿಸಿದ 7.8 ಮಿಲಿಯನ್ ಡಾಲರ್ ಪ್ರಕರಣದಲ್ಲಿ ಲೀ ತಪ್ಪಿತಸ್ತ ಎಂದು ಸಿಯೋಲ್ ಹೈ ಕೋರ್ಟ್ ತೀರ್ಪು ನೀಡಿದೆ