ಅರುಣಾಚಲ ಪ್ರದೇಶದಲ್ಲಿ ಚೀನಾ ಗ್ರಾಮ ನಿರ್ಮಿಸಿದೆ ಎಂಬ ವರದಿಯ ಬಗ್ಗೆ ಪ್ರಧಾನಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ಮಾಡಿದ್ದಾರೆ.
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ‘ಚೀನಾ ದೇಶದ ಬಗ್ಗೆ ಸುದ್ದಿಯ ಲಿಂಕ್ ಹಂಚಿಕೊಂಡು ‘ಮೈ ದೇಶ್ ಜುಕ್ನೆ ನಹೀ ದುಂಗಾ’ (ನಾನು ದೇಶವನ್ನು ತಲೆ ತಗ್ಗಿಸಲು ಬಿಡುವುದಿಲ್ಲ) ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಕೂಡ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದು, ಮೋದಿ ಅವರ 56 ಇಂಚಿನ ಎದೆ ಎಲ್ಲಿದೆ ಎಂದೂ ಲೇವಡಿ ಮಾಡಿದ್ದಾರೆ.ತನ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕತೆ ಸಮಗ್ರತೆ ಕಾಪಾಡಲು, ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ 100 ಮನೆಗಳನ್ನು ನಿರ್ಮಿಸಿಕೊಟ್ಟಿರುವುದಾಗಿ ಬಿಜೆಪಿ ಸಂಸದ ತಪಿರ್ ಗಾವ್ ಆರೋಪಿಸಿದ್ದರು. ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದ್ದಾರೆ, ಈ ಬಗ್ಗೆ ಸರ್ಕಾರ ತನ್ನ ಉತ್ತರ ತಿಳಿಸಬೇಕು ಎಂದು ಚಿದಂಬರಂ ಒತ್ತಾಯಿಸಿದ್ದಾರೆ.ಬಿಜೆಪಿ ಸಂಸದ ಮಾಡಿರುವ ಆರೋಪ ನಿಜವಾಗಿದ್ದು, ಕೇಂದ್ರ ಸರ್ಕಾರ ಮತ್ತೆ ಚೀನಾಗೆ ಕ್ಲೀನ್ ಚಿಟ್ ನೀಡುವುದೋ ಅಥವಾ ಹಿಂದಿನ ಸರ್ಕಾರಗಳ ಮೇಲೆ ಗೂಬೆ ಕೂರಿಸಲಿದೆಯೇ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.