ಬೆಂಗಳೂರು : ಸ್ಕೂಟರ್ ನಲ್ಲಿ ಸುತ್ತಾಡುತ್ತಾ, ನಗರದ ವಿವಿಧ ಪ್ರದೇಶಗಳಲ್ಲಿ ಒಬ್ಬಂಟಿಗರಾಗಿ ಓಡಾಡೋ ಇವರ ಟಾರ್ಗೆಟ್. ಹೀಗೆ ಹೊಂಚುಹಾಕಿ ಕಾಯುತ್ತಿದ್ದಂತ ಇಬ್ಬರು, ದಾರಿ ಹೋಕರನ್ನು ಚಾಕು ತೋರಿಸಿ ದರೋಡೆ ಮಾಡುತ್ತಿದ್ದರು. ಹೀಗೆ ದರೋಡೆ ಮಾಡಿದ್ದು ಒಂದಲ್ಲ ಎರಡಲ್ಲ.. ಬರೋಬ್ಬರಿ 80 ಮೊಬೈಲ್.
ಹೌದು.. ಸ್ಕೂಟರ್ ನಲ್ಲಿ ಬಂದು ವ್ಯಕ್ತಿಗೆ ಚಾಕು ತೋರಿಸಿ, ಮೊಬೈಲ್ ಕದಿಯುತ್ತಿದ್ದಂತ ಇಬ್ಬರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂದಿತರಿಂದ 80 ಮೊಬೈಲ್ ಮತ್ತು 10 ಸಾವಿರ ಹಣ ವಶ ಪಡಿಸಿಕೊಂಡಿದ್ದಾರೆ.ಅಂದಹಾಗೇ ಜನವರಿ 14ರಂದು ಬೆಳಗಿನ ಜಾವ ವ್ಯಕ್ತಿಯೊಬ್ಬರು ಬಿಎಂಟಿಸಿ ಡಿಪೋ ಹತ್ತಿರ ನಡೆದುಕೊಂಡು ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದರು.
ಇಂತಹ ವ್ಯಕ್ತಿಗೆ ಚಾಕು ತೋರಿಸಿ ವಿಪೋ ಮೊಬೈಲ್ ದರೋಡೆ ಮಾಡಿಕೊಂಡು ಹೋಗಿದ್ದರು. ಹೀಗೆ ದೂರು ದಾಖಲಾದ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದಂತ ಪೊಲೀಸರು, ಅಶೋಕ್ ಕುಮಾರ್ ಮತ್ತು ಆಂಜನೇಯಲು ಎಂಬುವರನ್ನು ಬಂಧಿಸಿದ್ದಾರೆ.
ಹೀಗೆ ಬಂಧಿತರನ್ನು ತನಿಖೆಗೆ ಒಳಪಡಿಸಿದಾಗ ಒಂದು ದರೋಡೆ ಮತ್ತು ಒಂದು ಮೊಬೈಲ್ ಕಳವು ಪ್ರಕರಣ ಪತ್ತೆಯಾಗಿದೆ. ಜೊತೆ 79 ಮೊಬೈಲ್ ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ. ಇನ್ನೂ 79 ಮೊಬೈಲ್ ಗಳು ವಾರಸುದಾರರು ಯಾರು ಎಂಬುದರ ಬಗ್ಗೆ ಪತ್ತೆ ನಡೆಸುತ್ತಿದ್ದಾರೆ.