Wednesday, May 31, 2023
Homeಸಿನಿಮಾಅಮೇರಿಕಾಕ್ಕೆ ಹಾರಿದ ತಲೈವಾ…!!

ಅಮೇರಿಕಾಕ್ಕೆ ಹಾರಿದ ತಲೈವಾ…!!

- Advertisement -


Renault

Renault
Renault

- Advertisement -

ಮೊನ್ನೆ ಮೊನ್ನೆ ಯಷ್ಟೇ ಸಕ್ರಿಯ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಇದೀಗ‌ ಮತ್ತೊಂದು ಆಘಾತ ನೀಡಿದ್ದು, ಅನಾರೋಗ್ಯದ ಕಾರಣಕ್ಕೆ ಅಮೇರಿಕಾಕ್ಕೆ ಹಾರಿದ್ದಾರೆ.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದೊಂದಿಗೆ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.

ಆದರೆ ಸಿನಿ ರಂಗದಲ್ಲಿ ಕೈಹಿಡಿದ ಅದೃಷ್ಟ ಇಲ್ಲಿ ಕೈಹಿಡಿದು ನಡೆಸಲಿಲ್ಲ. ಮತ್ತೆ‌ಮತ್ತೆ ಹದಗೆಡುತ್ತಲೇ ಇರುವ ಅನಾರೋಗ್ಯ ರಜನಿಕಾಂತ್ ಕನಸಿಗೆ ಅಡ್ಡಿ ಯಾಗಿದ್ದು ವೈದ್ಯರ ಸಲಹೆ ಹಾಗೂ ಆರೋಗ್ಯದ ದೃಷ್ಟಿಯಿಂದ ರಜನಿಕಾಂತ್ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಕಳೆದ ಕೆಲದಿನಗಳ ಹಿಂದೆಯಷ್ಟೇ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಜನಿಕಾಂತ್ ಕೊಂಚ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಅದರೇ ಇನ್ನೂ ಪೂರ್ತಿ ಪ್ರಮಾಣದಲ್ಲಿ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ತೆರಳಿದ್ದಾರೆ.

ಲಾಕ್ ಡೌನ್ ವೇಳೆ ಕಿಡ್ನಿ ಸೋಂಕಿಗೆ ಒಳಗಾಗಿದ್ದ ರಜನಿಕಾಂತ್ ಕೊಂಚ ಚೇತರಿಸಿಕೊಂಡಿದ್ದರು. ಬಳಿಕ ಬಹುಕಾಲ ವಿಶ್ರಾಂತಿ ಪಡೆದ ಅವರು ಡಿಸೆಂಬರ್ ಅಂತ್ಯಕ್ಕೆ ಪಕ್ಷ ಘೋಷಿಸಿ ಜನವರಿಯಿಂದ ಪ್ರಚಾರ ಹಾಗೂ ಪಕ್ಷದ ಚಟುವಟಿಕೆ ಆರಂಭಿಸುವುದಾಗಿ ಘೋಷಿಸಿದ್ದರು.

ಆದರೆ ಅನಾರೋಗ್ಯ ಸಮಸ್ಯೆ ಅವರ ಆಶಯಗಳಿಗೆ ಅಡ್ಡಿಯುಂಟು ಮಾಡಿದೆ. ಸಧ್ಯ ಅಮೇರಿಕಾಕ್ಕೆ ತೆರಳಿರುವ ರಜನಿ ಆರೋಗ್ಯ ಸುಧಾರಿಸಿದ ಬಳಿಕ ಇಂಡಿಯಾಕ್ಕೆ ಹಿಂತಿರುಗಲಿದ್ದು ಬಳಿಕ ಬಾಕಿ ಇರುವ ಅಣ್ಣಾತೆ ಚಿತ್ರದ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ.

ಇನ್ನು ರಜನಿಕಾಂತ್ ರಾಜಕೀಯದಿಂದ ದೂರ ಉಳಿಯುವ ನಿರ್ಣಯದ ಬಗ್ಗೆ ಬಹುಭಾಷಾ ನಟ ಕಮಲಹಾಸನ್ , ಖುಷ್ಬೂ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments