
ನವದೆಹಲಿ: ಜನವರಿ 30ರಂದು ಸ್ಮರಿಸಲಾಗುವ ಹುತಾತ್ಮ ದಿನಾಚರಣೆ ಅಂಗವಾಗಿ ಬೆಳಗ್ಗೆ 11 ಗಂಟೆಗೆ ಎರಡು ನಿಮಿಷಗಳ ಕಾಲ ಸಂಪೂರ್ಣ ಮೌನ ಆಚರಿಸುವಂತೆ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಈ ಬಾರಿಯ ಹುತಾತ್ಮ ದಿನಾಚರಣೆಯ ವಿಶೇಷವೆಂದರೆ ದೇಶದೆಲ್ಲೆಡೆ ಸಂಪೂರ್ಣ ಸ್ತಬ್ದವಾಗಿರುವಂತೆ ಸೂಚನೆ ನೀಡಿರುವುದಾಗಿದೆ. ಈ ಪ್ರಕಾರ ವಾಹನ ಚಲನೆಯೂ ಸೇರಿದಂತೆ ಎಲ್ಲರೂ ಮತ್ತು ಎಲ್ಲವೂ ಎರಡು ನಿಮಿಷಗಳ ಕಾಲ ಮೌನವಾಗಿರಬೇಕೆಂಬುದು ಗೃಹ ಇಲಾಖೆ ಆದೇಶದ ಸಾರಾಂಶವಾಗಿದೆ. ದೇಶಕ್ಕಾಗಿ ಪ್ರಾಣ ನೀಡಿದವರ ಸ್ಮರಣೆಗಾಗಿ ದೇಶದ ಎಲ್ಲಾ ನಾಗರಿಕರು ತಮ್ಮ ಎರಡು ನಿಮಿಷಗಳ ಸಮಯವನ್ನು ಅಪೂರ್ವವಾಗಿ ನೀಡಬೇಕಾಗಿದೆ. ಈ ವಿಚಾರದಲ್ಲಿ ಎಲ್ಲಾ ನಾಗರಿಕರು ಸಹಕರಿಸುತ್ತಾರೆ ಎಂಬ ನಂಬಿಕೆಯನ್ನು ಗೃಹ ಇಲಾಖೆ ವ್ಯಕ್ತಪಡಿಸಿದೆ.