ಮಂಗಳೂರು: ಭಗವಾನ್ ಬಬ್ಬುಸ್ವಾಮಿ ದೈವದ ಕಾಣಿಕೆ ಡಬ್ಬದಲ್ಲಿ 200 ರೂಪಾಯಿಯ ಖೋಟಾ ನೋಟಿನ ಸಹಿತ ಬಳಸಿದ ಕಾಂಡೋಮ್ ಸಿಕ್ಕಿರುವುದು ಇಲ್ಲಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಅತ್ತಾವರ ಸಮೀಪದ ಶೆಟ್ಲೆ ಗ್ರಾಮದ ಬಾಬುಗುಡ್ಡ ಭಗವಾನ್ ಬಬ್ಬುಸ್ವಾಮಿ ದೈವ ಸ್ಥಾನದ ಕಾಣಿಕೆ ಡಬ್ಬದಲ್ಲಿ ಇಂತಹದೊಂದು ವಿಕೃತ ಮನೋಭಾವನೆಯ ಪ್ರತಿರೂಪ ಕಾಣಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗಿದ್ದು, ಈಗಾಗಲೇ ಭಕ್ತ ವೃಂದವು, ದೈವಗಳೇ ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದಲ್ಲದೇ ಸಿಸಿ ಕ್ಯಾಮರಾ footage ನೋಡಿ ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಬಬ್ಬುಸ್ವಾಮಿ ದೈವದ ಕಾರ್ಣಿಕ ತಿಳಿಯದವರು ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗಿದೆ. ಇದೇ ರೀತಿ ಹಿಂದೆ ಬೇರೆ ಕಡೆ ದೈವಗಳಿಗೆ ಅಪಚಾರ ಮಾಡಿದವರಿಗೆ ಮತ್ತು ಅಂತಹ ಮಂದಿಯ ಕುಟುಂಬಕ್ಕೂ ಪರೋಕ್ಷವಾಗಿ ಶಿಕ್ಷೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.