ಬೆಂಗಳೂರು,ಜ.20- ಖಾಲಿ ನಿವೇಶನದ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಮಾಲೀಕರಿಂದ ಶುದ್ದ ಕ್ರಯ ಪತ್ರ ನೋಂದಣಿ ಮಾಡಿಸಿ ಬೇನಾಮಿ ಬ್ಯಾಂಕ್ ಖಾತೆ ತೆರೆದು ಬ್ಯಾಂಕ್ ಡಿಡಿಗಳನ್ನು ಆ ಖಾತೆಗೆ ಜಮೆ ಮಾಡಿಕೊಂಡು ವಂಚಿಸುತ್ತಿದ್ದ ದಂಪತಿ ಸೇರಿದಂತೆ 6 ಮಂದಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಸಿದ್ದಾರೆ.ಜೆಪಿನಗರ 5ನೇ ಹಂತ, 18ನೇ ಕ್ರಾಸ್ ನಿವಾಸಿ ಶೇಖರ್(36), ಈತನ ಪತ್ನಿ ಕೀರ್ತನಾ (29) ಮತ್ತು ಪ್ರಜ್ವಲ್ ರಾಮಯ್ಯ, ಪವನ್ ಕುಮಾರ್ (36), ಉಮಾಮಹೇಶ್ ರಾವ್(41), ಜಯಪ್ರಕಾಶ್(39) ಬಂತ ಆರೋಪಿಗಳು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.ಬಂತರಿಂದ 16.83 ಲಕ್ಷ ರೂ. ಬೆಲೆ ಬಾಳುವ 362 ಗ್ರಾಂ ತೂಕದ ಚಿನ್ನಾಭರಣ, ಹೊಂಡೈ ಕಾರು, ಟಾಟಾ ನೆಕ್ಸಾನ್ ಕಾರು ಮತ್ತು ಒಂದು ರಾಯಲ್ ಎನ್‍ಫೀಲ್ಡ್ ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ಶೇಖರ್ ಬಿಕಾಂ ವ್ಯಾಸಂಗ ಮಾಡಿದ್ದು ನೆಲಮಂಗಲದ ನ್ಯಾಷ್ ಇಂಡಸ್ಟ್ರೀಸ್‍ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಈತನ ಪತ್ನಿ ಕೀರ್ತನಾ ರಿಯಲ್ ಎಸ್ಟೇಟ್ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.
ಪವನ್‍ಕುಮಾರ್ ಬ್ಯಾಂಕ್ ಲೋನ್ ಏಜೆಂಟ್ ಕೆಲಸ ಮಾಡಿ ಕೊಂಡಿದ್ದು, ಉಮಾ ಮಹೇಶ್‍ರಾವ್ ಎಂಬಿಎ ಪದವೀಧರನಾಗಿದ್ದು, ಹಾಲಿ ಡೈರೆಕ್ಟರ್ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ . ಆರೋಪಿ ಜಯಪ್ರಕಾಶ್ ಮೂಲತಃ ತಮಿಳುನಾಡಿನ ವನಾಗಿದ್ದು, ಹಾಲಿ ವ್ಯವಸಾಯ ಮಾಡಿಕೊಂಡಿರುತ್ತಾನೆ. ಬೆಂಗಳೂರಿನ ಗೊಟ್ಟಿಗೆರೆ ಸರ್ವೆ ನಂಬರ್ 133/3ರ ಸೌತ್ ಅವೆನ್ಯೂ ಲೇಔಟ್, ಭಾಗ್ಯನಗರ, 8ನೇ ಕ್ರಾಸ್‍ನಲ್ಲಿ ಮೈಕಲ್ ಡಿಸೋಜ ಅವರ ಹೆಸರಿನಲ್ಲಿರುವ 282ರ ನಿವೇಶನವನ್ನು ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕಿಟ್ಟಿದ್ದಾರೆ.ಆರೋಪಿಗಳು ಜೇವರ್ಗಿಸ್ ಮ್ಯಾಥ್ಯೂ ಎಂಬಾತನನ್ನು ಕರೆತಂದು ಇವರೇ ನಿಜವಾದ ಮಾಲೀಕರು. ಇವರ ಹೆಸರು ಮೈಕಲ್ ಮ್ಯಾಥ್ಯೂ ಎಂದು ನಿವೇಶನ ಕೊಳ್ಳಲು ಬಂದ ಚಕ್ರವರ್ತಿ ನಡುಪಾಂಡು ದಂಪತಿಯನ್ನು ನಂಬಿಸಿದ್ದಾರೆ.ನಿವೇಶನವನ್ನು ಪತ್ನಿ ರುತಿರಾದೇವಿ ಚಕ್ರವರ್ತಿ ಅವರ ಹೆಸರಿಗೆ ಖರೀದಿಸಲು ಒಂದು ಕೋಟಿ ರೂ.ಗೆ ಮಾತುಕತೆ ನಡೆಸಿ ಚಕ್ರವರ್ತಿ ನಡುಪಾಂಡು ಒಪ್ಪಂದ ಮಾಡಿಕೊಂಡಿದ್ದಾರೆ.ಬಳಿಕ ಸಹಕಾರ ನಗರ ಶಾಖೆಯ ಐಸಿಐಸಿಐ ಬ್ಯಾಂಕ್‍ನಲ್ಲಿ 69, 62, 290 ರೂ. ಸಾಲ ಪಡೆದು 2019 ಡಿಸೆಂಬರ್ 21ರಂದು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬೊಮ್ಮನಹಳ್ಳಿ ಉಪನೋಂದಣಾಕಾರಿಗಳ ಕಚೇರಿಗೆ ಆರೋಪಿಗಳು ನಿವೇಶನ ಕೊಳ್ಳಲು ಬಂದಿದ್ದ ದಂಪತಿಯನ್ನು ಕರೆತಂದಿದ್ದಾರೆ. ಈವೇಳೆ ಐಸಿಐಸಿಐ ಬ್ಯಾಂಕ್‍ನ ಅಕಾರಿಗಳು ನೀಡಿದ್ದ ಡಿಡಿಯನ್ನು ಆರೋಪಿಗಳಿಗೆ ನೀಡಿದ್ದಾರೆ.ಆರೋಪಿಗಳ ಮಾತನ್ನು ನಂಬಿ ಜೇವರ್ಗಿಸ್ ಮ್ಯಾಥ್ಯೂನಿಂದ ಶುದ್ದ ಕ್ರಯ ಪತ್ರವನ್ನು ನೋಂದಣಿ ಮಾಡಿಸಿ, ಐಸಿಐಸಿಐ ಬ್ಯಾಂಕ್ ಡಿಡಿಯನ್ನು ಪೂರ್ವ ಯೋಜಿತವಾಗಿ ಒಳಸಂಚು ನಡೆಸಿ ಮಲ್ಲೇಶ್ವರಂ ಶಾಖೆ ಬಂಧನ್ ಬ್ಯಾಂಕ್‍ನಲ್ಲಿ ತೆರೆದಿದ್ದ ಬೇನಾಮಿ ಖಾತೆಯಲ್ಲಿ ಹಣವನ್ನು ಜಮಾ ಮಾಡಿಸಿಕೊಂಡು ನಂತರ ಹಣವನ್ನು ಹಂಚಿಕೊಂಡು ಬ್ಯಾಂಕ್‍ಗೆ ಮತ್ತು ನಿವೇಶನ ಪಡೆದಿದ್ದ ದಂಪತಿಗೆ ವಂಚಿಸಿದ್ದಾರೆ.
ಕೆಲ ತಿಂಗಳ ಬಳಿಕ ತಾವು ಪಡೆದು ಕೊಂಡಿರುವ ನಿವೇಶನ ಬೇರೆಯವರ ಹೆಸರಿನಲ್ಲಿ ಖಾತೆಯಾಗಿರುವುದು ತಿಳಿದು ದಂಪತಿ ಕೋಣನಕುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ದಕ್ಷಿಣ ವಿಭಾಗ ಉಪಪೊಲೀಸ್ ಆಯುಕ್ತ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಬಾಬು ನೇತೃತ್ವದಲ್ಲಿ ಕೋಣನಕುಂಟೆ ಠಾಣೆ ಇನ್‍ಸ್ಪೆಕ್ಟರ್ ನಂಜೇಗೌಡ, ಪಿಎಸ್‍ಐ ಸೌಮ್ಯ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಗ್ಗೆ ಹಲವುಮಾಹಿತಿಗಳನ್ನು ಪಡೆದು ದಂಪತಿ ಸೇರಿದಂತೆ ಆರು ಮಂದಿಯನ್ನು ಬಂಸಿ ನಿವೇಶನ ಮಾರಿದ್ದ ಹಣದಲ್ಲಿ ಖರೀದಿಸಿದ್ದ ಚಿನ್ನಾಭರಣ, ಕಾರುಗಳು ಹಾಗೂ ಬೈಕ್‍ನ್ನು ವಶಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಂಡದ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿಯವರು ಶ್ಲಾಘಿಸಿರುತ್ತಾರೆ.