Monday, September 26, 2022
Homeರಾಜಕೀಯರೆಸಾರ್ಟ್ ರಾಜಕೀಯಕ್ಕೆ ನಳಿನ್ ಹೊಸ ಟಚ್!

ರೆಸಾರ್ಟ್ ರಾಜಕೀಯಕ್ಕೆ ನಳಿನ್ ಹೊಸ ಟಚ್!

- Advertisement -
Renault

Renault

Renault

Renault






- Advertisement -

ಬೆಂಗಳೂರು: “ರೆಸಾರ್ಟ್‌ ರಾಜಕೀಯ’ ಋಣಾತ್ಮಕ ಕಾರಣ ಗಳಿಗೆ ಪ್ರಸಿದ್ಧ. ಆದರೆ ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿ ವಿಶೇಷ ಕಾರ್ಯಕ್ರಮದ ಮೂಲಕ ತಾನು ಭಿನ್ನ ಎಂದು ತೋರಿಸಿಕೊಟ್ಟಿದೆ.ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಈ ಚಟುವಟಿಕೆಗಳ ನಾಯಕತ್ವ ವಹಿಸಿದ್ದರು. ಆಟಗಳು, ಕಥೆ ಹೇಳು ವುದು, ಪ್ರತಿಭಾ ಪ್ರದರ್ಶನ ಇತ್ಯಾದಿ ಚಟುವಟಿಕೆಗಳ ಮೂಲಕ ಬಿಜೆಪಿ ಪದಾಧಿಕಾರಿಗಳು ಹೊಸ ಚೈತನ್ಯ ಮೈಗೂಡಿಸಿಕೊಂಡಿದ್ದಾರೆ.

ನಳಿನ್‌ ನಾಯಕತ್ವ :

ನಳಿನ್‌ ನೇತೃತ್ವದಲ್ಲಿ ಸುಮಾರು 29 ರಾಜ್ಯ ಪದಾಧಿಕಾರಿಗಳು ಮಂಗಳವಾರ ಸಂಜೆ ಬೆಂಗಳೂರಿನ ಹೊರ ವಲಯದ ರೆಸಾರ್ಟ್‌ಗೆ ತೆರಳಿ ಆಟಗಳ ಮೂಲಕ ಪುನಶ್ಚೇತನಗೊಳ್ಳುವ ಪ್ರಯತ್ನ ಮಾಡಿದ್ದಾರೆ.

ಈ ಕಾರ್ಯಕ್ರಮಕ್ಕೆ “ಸಹಲ್‌’ ಎಂದು ಹೆಸರಿಡಲಾಗಿತ್ತು.

ಪಕ್ಷದ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಇರುವ ಔಪಚಾರಿಕ ಚರ್ಚೆ, ಭಾಷಣ ಯಾವುದೂ ಇಲ್ಲದೆ ತಂಡ ಕಟ್ಟುವ, ವಿಶ್ವಾಸ ಬೆಳೆಸುವ, ಒಗ್ಗಟ್ಟು ಮೂಡಿಸುವ ಆಟಗಳನ್ನು ಈ ನಾಯಕರು ಆಡಿದ್ದಾರೆ.

ನಾವು ಒಂದು ದಿನ ರಾಜಕೀಯ ಇಲ್ಲದೆ ಆಟ, ಹರಟೆ ಮೂಲಕ ಕಾಲ ಕಳೆದಿದ್ದೇವೆ. ನಮ್ಮಲ್ಲಿ ವಿಶ್ವಾಸ, ನಂಬಿಕೆ ಆತ್ಮೀಯತೆ, ಸಂಘಟನೆ ಬಲಗೊಳಿಸುವ ಪಾಠವನ್ನು ಆಟಗಳ ಮೂಲಕ ಕಲಿತಿದ್ದೇವೆ.-ಕ್ಯಾ| ಗಣೇಶ್‌ ಕಾರ್ಣಿಕ್‌, ರಾಜ್ಯ ಬಿಜೆಪಿ ವಕ್ತಾರ

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments