*ಲಂಚ ಸ್ವೀಕಾರ,ಆರೋಪಿಯ ಜಾಮೀನು ಅರ್ಜಿ ವಜಾ.* ಮಂಗಳೂರು ತಾಲೂಕು ಕಛೇರಿಯ ದ್ವಿತೀಯ ದರ್ಜೆ ಸಹಾಯಕ ರಫೀಕ್ ಎಂಬ ಆರೋಪಿ ಕೆ.ಐ.ಎ.ಡಿ.ಬಿ. ಯ ಭೂಸ್ವಾದೀನ ಪರಿಹಾರದ ಬಗ್ಗೆ ಅರ್ಜಿ ವಿಲೇವಾರಿ ಮಾಡಲು ತೋಕೂರು ಗ್ರಾಮದ ಓಸ್ವಲ್ಡ್ ವೇಗಸ್ ಎಂಬವರಿಂದ ರೂ. 40,000/- ಲಂಚದ ಹಣ ಸ್ವೀಕರಿಸುತ್ತಿದ್ದಾಗ ಸದ್ರಿ ಓಸ್ವಾಲ್ಡ್ ವೇಗಸ್ ರವರು ನೀಡಿದ್ದ ದೂರಿನ ಆದಾರದಲ್ಲಿ ಮಂಗಳೂರಿನ ರ್ಭ್ರಷ್ಟಾಚಾರ ನಿಗ್ರಹದಳದ ಡಿ. ವೈ.ಎಸ್.ಪಿ. ಕೆ. ಸಿ. ಪ್ರಕಾಶ್ ಮತ್ತು ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಗುರುರಾಜ್ ರವರ ತಂಡ ದಾಳಿ ನಡೆಸಿ ಆರೋಪಿಯನ್ನು ದಿನಾಂಕ 05-01-2021 ರಂದು ಬಂದಿಸಿದ್ದರು. ಆರೋಪಿ ರಫೀಕ್ ಇದೀಗ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ಯವರು, ಅಪರಾಧ ದ ಗಂಭೀರತೆ ಯನ್ನು ಪರಿಗಣಿಸಿ, ಸದ್ರಿ ಜಾಮೀನು ಅರ್ಜಿಯನ್ನು ವಜಾಗೊಳಿಸಿ ದಿನಾಂಕ 20-01-2021 ರಂದು ಆದೇಶಿಸಿದ್ದಾರೆ.ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ಆರೋಪಿಗಳ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ ಶ್ರೀ. ಬಿ.ಬಿ.ಜಕಾತಿ ರವರು, ಆರೋಪಿ ರ್ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.”ಭ್ರಷ್ಟಾಚಾರದಂತಹ ಗಂಭೀರ ಪ್ರಕರಣದಲ್ಲಿ ತನಿಖೆ ಸಂಪೂರ್ಣ ಗೊಳ್ಳುವ ಮೊದಲು ಆರೋಪಿಗೆ ಜಾಮೀನು ನೀಡಿದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆ” : ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪರ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ವಾದಿಸಿದ್ದರು.