“ನೀ ತಾಂಟ್ರೇ” ಟೈಟಲ್ ರಿಜಿಸ್ಟರ್ ಮಾಡಲು ಸಿದ್ಧತೆ: ತುಳು ಸಿನೆಮಾ ಗ್ಯಾರಂಟಿ!
ಮಂಗಳೂರು: ತುಳು ಚಿತ್ರರಂಗಕ್ಕೆ ಅದ್ಬುತ ಸಿನೆಮಾ ಕೊಡುವ ಉದ್ದೇಶದಿಂದ “ಕೊತ್ತಿಮಿರಿ ಸೊಪ್ಪು” ಎಂದು ಹೆಸರಿಡಲು ಉದ್ದೇಶಿದ್ದ ಚಿತ್ರತಂಡ ಇದೀಗ ” ನೀ ತಾಂಟ್ರೇ… ಬಾ ತಾಂಟ್” ಟೈಟಲ್ ರಿಜಿಸ್ಟರ್ ಮಾಡಲು ಹೊರಟಿದೆ.
ಈಗಾಗಲೇ ಚಿತ್ರತಂಡ ಎರಡು ಮೂರು ಸುತ್ತಿನ ಮಾತುಕತೆ ನಡೆಸಿದೆ. ಈ ಹೇಳಿಕೆ ಹೆಚ್ಚು ವೈರಲ್ ಆದರೆ ಸಮಸ್ಯೆ ಆಗಬಹುದು ಮತ್ತು ಸಿನಿಮಾ ಜನಪ್ರಿಯತೆಗಳಿಸುವ ಸಾಧ್ಯತೆ ಕಡಿಮೆಯಾಗಬಹುದು ಎಂಬ ನಿಟ್ಟಿನಲ್ಲಿ ಕೂಡಾ ಚರ್ಚೆಯಾಗಿದೆ ಎಂದು ನಿರ್ಮಾಪಕರ ಆಪ್ತ ಮೂಲಗಳು ತಿಳಿಸಿವೆ.
ಈ ಸಿನಿಮಾ Tittle ರಿಜಿಸ್ಟರ್ ಮಾಡಿದರೆ ವೈರಲ್ ಆಗುವುದು ನಿಲ್ಲುತ್ತದೆ ಎಂಬ ಸಲಹೆ ಮೇರೆಗೆ ಚಿತ್ರತಂಡ ಮುಂದುವರೆದಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿ “ನೀ ತಾಂಟ್ರೇ… ಬಾ ತಾಂಟ್” ಹೆಸರು ಇನ್ನಷ್ಟು ವೈರಲ್ ಆಗುವುದನ್ನು ತಡೆಯುವ ಉದ್ದೇಶವನ್ನು ನಿರ್ಮಾಪಕರು ಹೊಂದಿದ್ದಾರೆ,ಎನ್ನಲಾಗಿದೆ.
ಅಂದ ಹಾಗೆ, ಚಿತ್ರದ ತಾರಾಗಣದಲ್ಲಿ ಹೆಚ್ಚಿನ ಹೊಸ ಮುಖಗಳ ಜೊತೆಗೆ ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್ ಮತ್ತಿತರರು ಗ್ಯಾರಂಟಿ ಎಂಬ ಸೂಚನೆ ಲಭ್ಯವಾಗಿದೆ.