ಹೊರಕಾಣಿಕೆ ಮೆರವಣಿಗೆ ವೈಭವ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮರೋಡಿ
ಶ್ರೀ ಕೊಡಮಣಿಂತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ ಪ್ರತಿಷ್ಠಾ ಕಲಶಾಭಿಷೇಕ ಅಂಗವಾಗಿ ವೈಭವದ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ನಡೆಯಿತು.
ಶಿರ್ತಾಡಿಯಿಂದ ಆರಂಭಗೊಂಡ ಮೆರವಣಿಗೆಗೆ ಸಮಿತಿ ಗೌರವಾಧ್ಯಕ್ಷ ಎಂ. ನಮಿರಾಜ ಪಾಂಡಿ ಗುಡ್ಡಾನ್ಬೆಟ್ಟು ಹಾಗೂ ಕಲಶಾಭಿಷೇಕ ಸಮಿತಿ ಗೌರವಾಧ್ಯಕ್ಷ, ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.
ಕೇರಳ ಚೆಂಡೆ,ನಾಸಿಕ್ ಬ್ಯಾಂಡ್ ಸೆಟ್, ಶ್ರೀ ಹನುಮಾನ್ , ಗೊರಿಲ್ಲಾ, ವಿವಿಧ ತಂಡಗಳಿಂದ ಕುಣಿತ ಭಜನೆ, ನೃತ್ಯ, ವೀರಗಾಸೆ ಹೀಗೆ ನಾನಾ ವೇಷ ಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ಗಮನ ಸೆಳೆದವು.
ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಡಾ.ಆಶೀರ್ವಾದ್,ಕಲಶಾಭಿ ಷೇಕ ಸಮಿತಿ ಅಧ್ಯಕ್ಷ ರತ್ನಾಕರ ಬುಣ್ಣನ್, ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮ್ ಪ್ರಸಾದ್, ಹೊರಕಾಣಿಕೆ ಸಮಿತಿ ಸಂಚಾಲಕ ಸುರೇಶ್ ಅಂಚನ್ ಅಟ್ಲಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.