ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಶ್ರೀರಕ್ಷಾ ಯೋಜನೆ: ನಿರ್ಗತಿಕರಿಗೆ ಕಂಬಳಿ ಹಂಚಿಕೆ

0
658

ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ‘ಶ್ರೀ ರಕ್ಷಾ’ ಯೋಜನೆಯು ಪಾವಗಡ ದಲ್ಲಿಯೂ ಆರಂಭವಾಗಿದೆ.

ಕೊರೆಯುವ ಚಳಿ ಶ್ರೀಮಂತರು, ಬಡವರು, ನಿರ್ಗತಿಕರು, ನಿರಾಶ್ರಿತರು ಎನ್ನದೆ ಎಲ್ಲರಿಗೂ ಚುರುಕುಮುಟ್ಟಿಸುತ್ತಿದೆ. ಈ ಹೊತ್ತಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮವು ಶ್ರೀರಕ್ಷೆ ಯೋಜನೆಯಡಿ ಅಗತ್ಯವಿರುವವರಿಗೆ ಕಂಬಳಿಗಳನ್ನು ನೀಡುತ್ತಿದೆ.

ತುಮಕೂರಿನ ಸ್ವಾಮಿ ಜಪಾನಂದಜಿ ಮಹಾರಾಜ್ ರವರು ಕಂಬಳಿಗಳನ್ನು ವಿತರಣೆ ಮಾಡಿದರು. ಈ ಕಾರ್ಯಕ್ರಮ ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ರೈಲ್ವೆ ಸ್ಟೇಷನ್, ಬಸ್ ಸ್ಟಾಂಡ್, ಮಾರುಕಟ್ಟೆ ಮುಂತಾದ ಸ್ಥಳಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಿರ್ಗತಿಕರಿಗೆ ಕಂಬಳಿ ನೀಡಲಾಗಿದೆ.

ಸ್ವಾಮಿ ವಿವೇಕಾನಂದರ ವಿಚಾರಧಾರೆ ಅನುಷ್ಠಾನರೂಪಕ್ಕೆ ತರಲಾಗಿದ್ದು, ಈ ಯೋಜನೆ ‘ಸಮರ್ಪಣ’ ಸಂಸ್ಥೆಯೊಂದಿಗೆ ನಡೆಸಲಾಗುತ್ತಿದೆ. ಇನ್ಫೋಸಿಸ್ ಫೌಂಡೇಶನ್ ನ ಪ್ರಾಯೋಜಕತ್ವದಲ್ಲಿ ಯೋಜಿಸಲಾಗಿದೆ

LEAVE A REPLY

Please enter your comment!
Please enter your name here