ರಾಜಸ್ಥಾನದ ಇಂಧೋರ್‌ನಲ್ಲಿ ವ್ಯಾಪಕವಾಗಿ ಹರಡಿದ್ದ ಹಕ್ಕಿ ಜ್ವರ ಇದೀಗ ಕೇರಳ ರಾಜ್ಯದ ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ರಾಜ್ಯಕ್ಕೂ ಹಕ್ಕಿ ಜ್ವರದ ಭೀತಿ ಎದುರಾಗಿದೆ.
ಕಳೆದ ನಿನ್ನೆ ರಾಜಸ್ತಾನದಲ್ಲಿ 400ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರದಿಂದಾಗಿ ಸಾವನ್ನಪ್ಪಿದ್ದವು. ಈ ಬಳಿಕ ಇಂದು ಕೇರಳದಲ್ಲೂ ಹಕ್ಕಿ ಜ್ವರದಿಂದಾಗಿ 12 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ. ಭೂಪಾಲ್ ಗೆ ಕಳುಹಿಸಲಾದಂತ ಪರೀಕ್ಷೆಯ ಮಾದರಿಯಲ್ಲಿ ಹಕ್ಕಿ ಜ್ವರ ದ ವೈರಸ್ (ಎಚ್5ಎನ್8) ಪತ್ತೆಯಾಗಿದೆ.
ಈಗಾಗಲೇ ಕೇರಳ ಎರಡು ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದ್ದು, ಕ್ಷಿಪ್ರ ಸ್ಪಂದನ ತಂಡವನ್ನು ನಿಯೋಜಿಸಲಾಗಿದೆ. ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರದಿಂದಾಗಿ ಇದುವರೆಗೆ 12,000 ಬಾತುಕೋಳಿಗಳು ಸತ್ತಿವೆ. 36,000ಕ್ಕೂ ಹೆಚ್ಚು ಬಾತುಕೋಳಿಗಳು ಹರಡುವುದನ್ನು ತಪ್ಪಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಪಕ್ಷಿ ಜ್ವರದಿಂದ ಸಾವು ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿಗಳನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಕಾಲೇಜು ಇರುವ ರೆಸಿಡೆನ್ಸಿ ಪ್ರದೇಶದಲ್ಲಿ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ಇರುವವರನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here