ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ವೈರಲ್!!ಏನಿದು ಕೆಜಿಎಫ್ ಟೈಮ್ಸ್?

0
493

ಕೆಜಿಎಫ್-೨ ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯಲು ಒಂದೊಂದೆ ಅಸ್ತ್ರಗಳನ್ನು ತೂರಿಬಿಡುತ್ತಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆಗೆ ಕಾತುರರಾಗಿದ್ದಾರೆ. ಬೆಳಗ್ಗೆ ಚಿತ್ರದ ನಾಯಕ ನ ಮತ್ತೊಂದು ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ, ಈಗ ಪತ್ರಿಕೆ ಬಿಡುಗಡೆ ಮಾಡಿದೆ.

ಅರೇ ಇದೇನು ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಪೇಪರ್ ಆರಂಭಿಸಿದ್ಯಾ ಅಂತ ಅಂದ್ಕೋಬೇಡಿ, ಚಿತ್ರತಂಡ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರೋದು ಸಿನಿಮಾ ಪ್ರಮೋಶನ್ ಗೆ.

ಕೆಜಿಎಫ್-೨ ಚಿತ್ರದ ಪ್ರಮೋಶನ್ ಗಾಗಿ ಫಿಲ್ಮಂ ಟೀಂ, ಕೆಜಿಎಫ್ ಟೈಮ್ಸ್ ಹೆಸರಿನಲ್ಲಿ ಹಳೆಕಾಲದ ಪತ್ರಿಕೆ ಹೋಲುವ ಪತ್ರಿಕೆಯನ್ನು ಕನ್ನಡ,ಇಂಗ್ಲೀಷ್, ತೆಲುಗು,ತಮಿಳು,ಮಲಯಾಳಂ ಜೊತೆಗೆ ಹಿಂದಿ ಭಾಷೆಯಲ್ಲೂ ಬಿಡುಗಡೆ ಮಾಡಲಾಗಿದೆ.

ಪತ್ರಿಕೆಗಳಂತೆ ಹೆಡ್ಡಿಂಗ್ ಜೊತೆ ಕೆಜಿಎಫ್-೨ ಸ್ಟೋರಿ ಮುದ್ರಿಸಲಾಗಿದ್ದು, ನಾಯಕನಾ ಅಥವಾ ಖಳನಾಯಕನಾ ಎಂದು ಪ್ರಶ್ನಿಸುವ ಟೈಟಲ್ ನೀಡಲಾಗಿದೆ.

ಅಲ್ಲದೇ ಪತ್ರಿಕೆಯಂತೆ ಅಲ್ಲಲ್ಲಿ ಸುದ್ದಿಗಳನ್ನು ಮುದ್ರಿಸಲಾಗಿದ್ದು ಎಲ್ಲವೂ ರಾಖಿಗೆ ಸಂಬಂಧಿಸಿದ ಸುದ್ದಿಗಳೇ ಆಗಿದ್ದು ಮೇಲ್ಭಾಗದ ಬಲ ತುದಿಯಲ್ಲಿ ಕೊನೆಯ ಆವೃತ್ತಿ ಎಂದು ನಮೂದಿಸಲಾಗಿದೆ.

ಅಲ್ಲದೇ ಪತ್ರಿಕೆಯಂತೆ ಅಲ್ಲಲ್ಲಿ ಸುದ್ದಿಗಳನ್ನು ಮುದ್ರಿಸಲಾಗಿದ್ದು ಎಲ್ಲವೂ ರಾಖಿಗೆ ಸಂಬಂಧಿಸಿದ ಸುದ್ದಿಗಳೇ ಆಗಿದ್ದು ಮೇಲ್ಭಾಗದ ಬಲ ತುದಿಯಲ್ಲಿ ಕೊನೆಯ ಆವೃತ್ತಿ ಎಂದು ನಮೂದಿಸಲಾಗಿದೆ.

ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಅಂಗವಾಗಿ ಕೆಜಿಎಫ್-೨ ಚಿತ್ರದ ಟೀಸರ್ ರಿಲೀಸ್ ಆಗಲಿದ್ದು ಇದಕ್ಕೂ ಮುನ್ನವೇ ಚಿತ್ರತಂಡ ರಿಲೀಸ್ ಮಾಡಿರುವ ಈ ಪೇಪರ್ ಕಟಿಂಗ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಫೇಸ್ ಬುಕ್,ಟ್ವೀಟರ್ ಹಾಗೂ ಇನ್ ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಈ ಪೇಪರ್ ಕಟಿಂಗ್ಸ್ ವೈರಲ್ ಆಗಿದೆ.ಪ್ರಶಾಂತ್ ನೀಲ್ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಈ ಕಪ್ಪು ಅಕ್ಷರದ ಹಳದಿ ಬಣ್ಣದ ಪೇಪರ್ ಕೆಜಿಎಫ್ ಟೈಮ್ಸ್ ಪ್ರಕಟಿಸುವ ಮೂಲಕ ಚಿತ್ರದ ಪ್ರಮೋಶನ್ ಗೆ ತಂಡ ಎಷ್ಟು ವಿಭಿನ್ನವಾಗಿ ಪರಿಶ್ರಮಿಸುತ್ತಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

LEAVE A REPLY

Please enter your comment!
Please enter your name here