ಪರಿಷತ್ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿ ಆದೇಶಿಸಿರುವ ತನಿಖೆ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಷತ್ ಸದಸ್ಯರ ನಡವಳಿಕೆಗಳ ಬಗ್ಗೆ ತನಿಖೆಗೆ ಸಭಾಪತಿ ಆದೇಶ ನೀಡಿಲ್ಲ. ಈ ರೀತಿಯ ಗದ್ದಲ ಗಲಾಟೆ ಯಾರೂ ನಿರೀಕ್ಷಿಸಿರಲಿಲ್ಲ ಎಂದರು.

ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ದಿನ ಕಳೆದಿತ್ತು, ಹೀಗಾಗಿ ಅವರಾಗಿಯೇ ಕುರ್ಚಿ ಬಿಟ್ಟು ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು, ಆದರೆ ಬೆಲ್ ನಂತರವೂ ಸಭಾಪತಿ ಬಾರದಿರುವ ಕಾರಣ ಉಪಸಭಾಪತಿಯವರನ್ನು ಕೂರಿಸಲಾಯಿತು. ಇದಾದನಂತರ ಅನಿರೀಕ್ಷಿತ ರೀತಿನಲ್ಲಿ ಗಲಾಟೆ ಗದ್ದಲ ನಡೆಯಿತು ಎಂದ ಅವರು, ಈ ಕುರಿತು ನಡೆಯುತ್ತಿರುವ ತನಿಖೆ ಕೇವಲ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

ವೀಲಿನದ ಹೆಸರಲ್ಲಿ ಜೆಡಿಎಸ್ ಇಬ್ಬಾಗ ಮಾಡಲು ಬಿಜೆಪಿ ತಂತ್ರ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರೇ ವಿಧಾನ ಪರುಷತ್ತಿನಲ್ಲಿ ನಮಗೆ ಬೆಂಬಲಿಸಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯ ವಿವಿಧ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ, ಯಾವುದೇ ಶಾಸಕರಿಗೂ ಮೊದಲಿನಂತೆ ಬಜೆಟ್ ನೀಡಲು ಸಾಧ್ಯವಾಗಿಲ್ಲ ಎಂದರು.

ಎಲ್ಲಾ ಕೆಲಸವು ಸರಿಯಾಗಿ ಆಗಿದೆ ಎಂದು ಆತ್ಮವಿಶ್ವಾಸದಿಂದ ಯಾರು ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಇನ್ನೂ ಯತ್ನಾಳ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಅವರನ್ನೇ ಕೇಳಿ ಎಂದು ಉತ್ತರಿಸಿದರು

LEAVE A REPLY

Please enter your comment!
Please enter your name here