ವಿಜಯಪುರ:ಯಾವುದೇ ವ್ಯಾಕ್ಸಿನ್ ಮಾನ್ಯತೆ ನೀಡಬೇಕಾದರೆ 3ನೇ ಹಂತದ ಪ್ರಯೋಗ ಅವಶ್ಯವಿದೆ. ಈಗ ಲಸಿಕೆ ತುರ್ತು ಅವಶ್ಯಕವಿರುವುದು ನಿಜಾ. ಹಾಗಂತ ಸಂಪೂರ್ಣ ಪರೀಕ್ಷೆಯಾಗದೇ ಜನರ ಮೇಲೆ ಇದನ್ನು ಪ್ರಯೋಗ ಮಾಡುವಂತಿಲ್ಲ ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ವ್ಯಾಕ್ಸಿನ್ ಬಗ್ಗೆ ಪ್ರತಿಪಕ್ಷಗಳ ಅಪಸ್ವರ ವಿಚಾರವಾಗಿ ಪ್ರತಿಕ್ರಿಯಿಸಿ, ಆತ್ಮ ನಿರ್ಭರ ಹೆಸರಿನಲ್ಲಿ ಜನರ ಮೇಲೆ ಕೊರೋನಾ ಲಸಿಕೆ ಪ್ರಯೋಗ ಸರಿಯಲ್ಲ, ಮೊದಲು ಲಸಿಕೆ ಎಲ್ಲ ಪರೀಕ್ಷೆಗಳು ಪೂರ್ಣವಾಗಲಿ. ರಷ್ಯಾ ಅಧ್ಯಕ್ಷ ಪುಟಿನ್ ಮಾದರಿಯಲ್ಲಿ ಇದನ್ನು ಸಮರ್ಥಿಸುವವರು ಮೊದಲು ಲಸಿಕೆ ಬಳಸಲಿ ಎಂದು ಹೇಳಿದರು.
ಇನ್ನು ಆತ್ಮ ನಿರ್ಭರ ಎಂದು ಪ್ರತಿಪಾದಿಸುವವರು ಮೊದಲು ಲಸಿಕೆ ಹಾಕಿಸಿಕೊಳ್ಳಲಿ ಎಂದು ಪ್ರಧಾನಿ ಹೆಸರೇಳದೆ, ಪರೋಕ್ಷವಾಗಿ ಮಾತನಾಡಿದರು.
ಈ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ, ಶಾಲೆ-ಕಾಲೇಜುಗಳು ಆರಂಭವಾಗಿವೆ, ಬಡವಿದ್ಯಾರ್ಥಿಗಳು, ಪೋಷಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ, ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡು ಮುಂದಡಿ ಇಡಬೇಕಾಗಿದೆ ಎಂದರು.
ಅಲ್ಲದೆ ಬ್ರಿಟನ್ ರೂಪಾಂತರ ಕೊರೋನಾ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯಬೇಕಿದೆ ಎಂದು ಹೇಳಿದರು.