ಕೊಟ್ಟಾಯಂ: ಕೇರಳ ರಾಜ್ಯದ ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ರೋಗ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೋಳಿ, ಬಾತುಕೋಳಿ ಮತ್ತು ಇತರೆ ಸಾಕಲಾದ ಹಕ್ಕಿಗಳನ್ನು ಕೊಲ್ಲಲು ಆರಂಭ ಮಾಡಲಾಗಿದೆ.
ಕೇರಳದ ಕೊಟ್ಟಾ ಯಂ ಮತ್ತು ಆಳಪುಳ ಜಿಲ್ಲೆಯಲ್ಲಿ ಮಂಗಳವಾರ 80 ಸಾವಿರಕ್ಕೂ ಮಿಕ್ಕಿದ ಕೋಳಿ, ಬಾತು ಕೋಳಿಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಸರಕಾರ Rapid Action Team ರೂಪಿಸಿದೆ. ಈ ಹಕ್ಕಿಗಳ ಮೂಲಕ ಮಾನವರ ಆರೋಗ್ಯ ಕೆಡಿಸುವ ಹಕ್ಕಿ ಜ್ವರದ ವೈರಸ್ H5N8 ಹರಡುತ್ತದೆ ಎಂದು ಮುಂಜಾಗರೂಕತೆ ಕೈಗೊಳ್ಳ ಲಾಗುತ್ತಿದೆ.

ಕೋಳಿ ಮತ್ತಿತರ ಹಕ್ಕಿಗಳ ಕೊಲ್ಲುವ ಜೊತೆಗೆ ಸರ್ಕಾರ ಭಾರಿ ಮು ನ್ನೆ ಚ್ಚರಿಕೆ ನೀಡಿದ್ದು, ರೋಗ ಪತ್ತೆ ಮಾಡಲು ಮತ್ತು ಹರಡುವಿಕೆ ತಡೆಯಲು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ತಂಡ ರಚಿಸಿದೆ.ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಹರಡುವ ವೈರಸ್ ಪತ್ತೆಯಾಗಿರುವುದನ್ನು ಭೋಪಾಲ್ ನಲ್ಲಿರುವ ರಾಷ್ಟ್ರೀಯ ಪ್ರಾಣಿ ರೋಗಗಳ ಸಂಶೋಧನಾಲಯ ಸೋಮವಾರ ವರದಿ ನೀಡಿತ್ತು.

ಆಳಪುಳ ಜಿಲ್ಲಾಧಿಕಾರಿ ಕುಟ್ಟನಾಡ್ ಮತ್ತು ಕಾರ್ತಿಕಾಪಲ್ಲಿ ತಾಲೂಕುಗಳಲ್ಲಿ ಕೋಳಿ, ಬಾತು ಕೋಳಿ ಮಾಂಸ, ಮೊಟ್ಟೆ ಮತ್ತಿತರ ಪಕ್ಷಿ ಜನ್ಯ ಆಹಾರ ಪದಾರ್ಥ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಮಂಗಳೂರು ವಾರ್ತೆ