Tuesday, September 27, 2022
Homeಕ್ರೈಂಖೋಟಾ ನೋಟು ಜಾಲದ ಮೂವರ ವಿರುದ್ಧ ಎಫ್ಐಆರ್!

ಖೋಟಾ ನೋಟು ಜಾಲದ ಮೂವರ ವಿರುದ್ಧ ಎಫ್ಐಆರ್!

- Advertisement -
Renault

Renault

Renault

Renault


- Advertisement -

ಚಿಕ್ಕಬಳ್ಳಾಪುರ : ನೋಟು ಚಲಾವಣೆ ಪ್ರಕರಣದಲ್ಲಿ ಚಿಕ್ಕಬಳ್ಳಾಪುರದ ಇಬ್ಬರು ಸೇರಿ ಮಹಾರಾಷ್ಟ್ರ ಮೂಲದ ಒಬ್ಬ ಆರೋಪಿಯ ವಿರುದ್ಧ ರಾಷ್ಟ್ರೀಯ ತನಿಖಾದಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗಂಗಸುಂದರ ಗ್ರಾಮದ ಇಶಾಕ್‌ ಖಾನ್‌, ಮಂಚೇನಹಳ್ಳಿಯ ರಾಧಾಕೃಷ್ಣ ಮತ್ತು ಮಹಾರಾಷ್ಟ್ರದ ಥಾಣೆಯ ಜಾಸಿಂ ಅಲಿಯಾಸ್‌ ವಾಸಿಂ ವಿರುದ್ಧ ಮುಂಬೈನ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಜನವರಿ 4ರಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಕೋಲ್ಕತ್ತಾದ ಅಲಿಪುರ ಜೈಲಿನಲ್ಲಿದ್ದ ಆರೋಪಿ ಇಶಾಕ್‌ ಖಾನ್‌, 2019ರ ಮೇ 14ರಂದು ಆರೋಪಿಗಳಾದ ಜಾಸಿಂ ಮತ್ತು ರಾಧಾಕೃಷ್ಣನನ್ನು ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಪರಸ್ಪರ ಭೇಟಿ ಮಾಡಿಸಿದ್ದ. ಇಶಾಕ್‌ ಖಾನ್‌ ಸೂಚನೆ ಮೇರೆಗೆ ಆರೋಪಿ ರಾಧಾಕೃಷ್ಣ ಒಟ್ಟು 82 ಸಾವಿರ ರೂಪಾಯಿಗಳ ಖೋಟಾ ನೋಟುಗಳನ್ನು ಜಾಸಿಂಗೆ ಕೊಟ್ಟಿದ್ದ ಎನ್ನಲಾಗಿದೆ.
ಖೋಟಾ ನೋಟುಗಳ ಚಲಾವಣೆ ಕುರಿತು ನಿಖರ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಥಾಣೆಯ ಅಮೃತ ನಗರದಲ್ಲಿರುವ ಆರೋಪಿ ಜಾಸಿಂ ಮನೆಯಲ್ಲಿ 82 ಸಾವಿರ ರೂ. ಮೌಲ್ಯದ ಖೋಟಾ ನೋಟುಗಳು ಸಿಕ್ಕಿದ್ದವು. ಜತೆಗೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಆರೋಪಿಯನ್ನು ವಿಚಾರಣೆ ನಡೆಸಿದಾಗ ಈ ಮೂವರು ಇನ್ನಿತರ ಆರೋಪಿಗಳ ಜತೆ ಸೇರಿ ದೇಶದ ವಿವಿಧೆಡೆ ನೋಟುಗಳನ್ನು ಚಲಾವಣೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿತ್ತು.
ಬಾಂಗ್ಲಾದೇಶದಿಂದ ಭಾರತಕ್ಕೆ ನೋಟುಗಳನ್ನು ಸಾಗಣೆ ಮಾಡಲಾಗಿತ್ತು ಎಂಬುದು ಬಹಿರಂಗವಾಗಿತ್ತು. ಅಂತಾರಾಷ್ಟ್ರೀಯ ನಂಟಿನ ಕುರಿತು ತನಿಖೆ ಮುಂದುವರಿದಿದೆ ಎಂದು ಎನ್‌ಐಎ ತಿಳಿಸಿದೆ

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments