ಲಕ್ನೋ:ಯುವತಿಯೊಬ್ಬಳನ್ನು ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿಸಿ ವಿಕಾರತೆ ಮೆರೆದು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬದಾನ್ ನ ಮೇವಾಲಿಯಲ್ಲಿ ನಡೆದಿದೆ.

ಈ ಘಟನೆ ದೆಹಲಿಯ ನಿರ್ಭಯಾ ಪ್ರಕರಣ ನೆನಪಿಸುವಂತಿದೆ. ಕಾಮುಕರು ದುರ್ದೈವಿಯ ಗುಪ್ತಾಂಗಕ್ಕೆ ರಾಡ್ ಹಾಕಿರೋದು ಮಾತ್ರವಲ್ಲದೆ ಬಲವಾದ ಅಸ್ತ್ರದಿಂದ ತಲೆಗೆ ಏಟು ಹಾಕಿದ್ದಾರೆ. ಆಕೆಯ ಶ್ವಾಸಕೋಶ ಒಡೆದಿದ್ದು, ಪಕ್ಕೆಲುಬು ಮತ್ತು ಕಾಲುಗಳಿಗೆ ತೀವ್ರ ರೂಪದ ಗಾಯಗಳಾಗಿವೆ.
ಪೊಲೀಸರು ಆಕೆಯ ಮನೆಯವರಲ್ಲಿ ವಿಚಾರಿಸಿದಾಗ, ಮಹಂತ್ ಬಾಬಾ ಸತ್ಯನಾರಾಯಣ, ವೇದ್ ರಾಮ, ಮತ್ತು ಚಾಲಕ ಜಸ್ವಾಲ್ ಮೇಲೆ ಸಂಶಯ ವ್ಯಕ್ತ ಪಡಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಎಸ್ ಎಸ್ ಪಿ ಸಂಕಲ್ಪ್ ಶರ್ಮ ತಿಳಿಸಿದ್ದಾರೆ.
ಮಂಗಳೂರು ವಾರ್ತೆ.