Tuesday, June 6, 2023
Homeರಾಜಕೀಯಜೆಡಿಎಸ್ ನಾಯಕರು ಸರಿಯಿಲ್ಲ ಎಂದ ಮಧು ಬಂಗಾರಪ್ಪ!

ಜೆಡಿಎಸ್ ನಾಯಕರು ಸರಿಯಿಲ್ಲ ಎಂದ ಮಧು ಬಂಗಾರಪ್ಪ!

- Advertisement -


Renault

Renault
Renault

- Advertisement -

ಜೆಡಿಎಸ್ ಪಕ್ಷದಿಂದ ಈಗಾಗಲೇ ಮಾನಸಿಕವಾಗಿ ದೂರವಾಗಿರುವ ಮಾಜಿ ಶಾಸಕ ಮಧು ಬಂಗಾರಪ್ಪ, ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುವ ಮೂಲಕ ಕಾಂಗ್ರೆಸ್ ಸೇರುವ ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ ಕಾರಣಕ್ಕೆ ಪಕ್ಷದ ವರಿಷ್ಠರ ವಿರುದ್ಧ ಹೇಳಿಕೆ ನೀಡಿದ್ದೆ. ಆ ಬಳಿಕ ನನ್ನನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ಹೇಳಿದ ವೇಳೆ ದತ್ತಾ ಅಥವಾ ರಮೇಶ್ ಬಾಬು ಅವರನ್ನು ಮಾಡುವಂತೆ ತಿಳಿಸಿದ್ದೆ. ಆದರೆ ಇದನ್ನು ಕುಮಾರಣ್ಣ ಹಾಗೂ ದೇವೇಗೌಡರು ಪರಿಗಣಿಸಲಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಕೆಲವು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದ ವೇಳೆ ಕಾಂಗ್ರೆಸ್ ದೊಡ್ಡಮಟ್ಟದಲ್ಲಿ ನೆರವಾಗಿದೆ ಎಂದು ಹೇಳಿದ ಮಧು ಬಂಗಾರಪ್ಪ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿಶ್ವಾಸದಿಂದ ಇದ್ದಾರೆ ಎನ್ನುವ ಮೂಲಕ ಮುಂದೆ ಕಾಂಗ್ರೆಸ್ ಸೇರುವ ಪರೋಕ್ಷ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments