ಯುವರಾಜ್ ಹೇಳಿದ ಭವಿಷ್ಯ ನನ್ನ ಜೀವನದಲ್ಲಿ ನಿಜವಾಗಿದೆ; ರಾಧಿಕಾ ಕುಮಾರಸ್ವಾಮಿ

0
827

ಬಿಜೆಪಿ ಹಾಗೂ ಆರ್​ಎಸ್​ಎಸ್​ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್​ ಅಲಿಯಾಸ್​​ ಸ್ವಾಮಿ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಥಳುಕು ಹಾಕಿಕೊಂಡಿದೆ. ಬಂಧಿತ ಯುವರಾಜನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ವರ್ಗಾವಣೆಯಾಗಿರುವ 1.25 ಕೋಟಿ ರೂಪಾಯಿ ಸಂಬಂಧ ಸ್ವತಃ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಹೀಗಾಗಿ ಅವರು ಐತಿಹಾಸಿಕ ಸಿನಿಮಾ ಮಾಡೋದ್ರ ಬಗ್ಗೆ ನನ್ನೊಡನೆ ಚರ್ಚೆ ಮಾಡಿದ್ದರು. ಮುಂದಿನ ವರ್ಷ ನಿಮ್ಮ ಡೇಟ್ಸ್​ ಬೇಕು ಎಂದು ಹೇಳಿದ್ದ ಸ್ವಾಮಿ ನನ್ನ ಖಾತೆಗೆ 15 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಸಲ್ಲಿಸಲೂ ನಾನು ಸಿದ್ಧಳಿದ್ದೇನೆ. ಈ ಸಿನಿಮಾವನ್ನ ಸ್ವಾಮಿ ಅವರ ಭಾವ ನಿರ್ಮಾಣ ಮಾಡುವವರಿದ್ದರು. ನನಗೆ ಸ್ವಾಮಿ 1.25 ಕೋಟಿ ರೂಪಾಯಿ ನೀಡಿದ್ದಾರೆ ಅನ್ನೋದು ಕೇವಲ ವದಂತಿ. ಅಲ್ಲದೇ ನನ್ನ ಸಹೋದರನ ಖಾತೆಗೂ ಸ್ವಾಮಿ ಹಣ ಹಾಕಿಲ್ಲ.

ಡಿಸೆಂಬರ್​ ವೇಳೆ ನಿಮಗೆ ಅಶುಭ ಘಳಿಗೆ ಕಾದಿದೆ ಎಂದು ಸ್ವಾಮಿ ಭವಿಷ್ಯ ನುಡಿದಿದ್ದರು. ಅಲ್ಲದೇ ಫೆಬ್ರವರಿ ಬಳಿಕ ಶುಕ್ರದೆಸೆ ಬರಲಿದೆ ಅಂತಾನೂ ಹೇಳಿದ್ರು. ಆದರೆ ಅವರಿಂದಲೇ ನನಗೆ ಈ ಆರೋಪ ಎದುರಿಸಬೇಕಾದ ದಿನ ಬರುತ್ತೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ರು.ಸಿನಿಮಾ ನಿರ್ಮಾಣಕ್ಕಾಗಿ ಸ್ವಾಮಿ 15 ಲಕ್ಷ ವರ್ಗಾವಣೆ ಮಾಡಿದ್ದರೆ ಇನ್ನೊಬ್ಬರ ಖಾತೆಯಿಂದ 60 ಲಕ್ಷ ರೂಪಾಯಿ ಬಂದಿದೆ. ಆದರೆ ಈ 75 ಲಕ್ಷ ರೂಪಾಯಿಗೆ ಅಗ್ರಿಮೆಂಟ್​ ಮಾಡಿಕೊಂಡಿಲ್ಲ. ಯುವರಾಜ್​ ಜೊತೆ ಸಿನಿಮಾ ನಿರ್ಮಾಣ ಬಿಟ್ಟು ನನಗೆ ಬೇರೆ ಯಾವುದೇ ವ್ಯವಹಾರ ಇಲ್ಲ ಎಂದು ಸ್ಪಷ್ಟನೆ ನೀಡಿದ್ರು.

LEAVE A REPLY

Please enter your comment!
Please enter your name here