ಬೆಂಗಳೂರು : ನೀವು ನನ್ನನ್ನು ಸುಲಭವಾಗಿ ಅರೆಸ್ಟ್ ಮಾಡಿದ್ದೀರಾ. ಆದ್ರೆ ದಾವೂದ್ ಇಬ್ರಾಹಿಂ ಕ್ರೈಂಗಳನ್ನು ಮಾಡುತ್ತಾ ಇನ್ನೂ ಆಕ್ಟಿವ್ ಆಗಿದ್ದಾನೆ.
ತಾಕತ್ ಇದ್ರೆ ಆತನನ್ನು ಸೆರೆಹಿಡಿದು ತೋರಿಸಿ ಎಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಅನಾರೋಗ್ಯದಿಂದ ಪೊಲೀಸರ ಭದ್ರತೆಯೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಪಾತಕಿ ರವಿ ಪೂಜಾರಿ ಪೊಲೀಸರಿಗೆ ಸವಾಲು ಹಾಕಿದ್ದಾನೆ.
ನಾನು ಈ ಹಿಂದೆ ಭೂಗತ ಲೋಕದಲ್ಲಿ ಆಕ್ವಿವ್ ವಾಗಿದ್ದೆ. ಆಗ ಬೆಂಗಳೂರು ಸೇರಿ ಹಲವೆಡೆ ಬೆದರಿಕೆ ಹಾಗೂ ಇತರ ಕೃತ್ಯ ನಡೆಸಿದ್ದು ಸತ್ಯ.
ಆದರೆ, ಆಫ್ರಿಕದ ಸೆನೆಗಲ್ ಸೇರಿದ ಬಳಿಕ ನಾನು ಯಾವುದೇ ಕ್ರೈಂನಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಅಲ್ಲದೆ ತನ್ನ ಮೇಲೆ ಸುಖಾ ಸುಮ್ಮನೆ ಬೇರೆ ಬೇರೆ ಕೇಸ್ ಗಳನ್ನ ಹಾಕಲಾಗುತ್ತಿದೆ ಎಂದು ಆರೋಪಿಸಿರುವುದಾಗಿ ತಿಳಿದುಬಂದಿದೆ.
ಇನ್ನು ರವಿಪೂಜಾರಿ ಕೇರಳದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದ್ದು, ಬಾಡಿ ವಾರೆಂಟ್ ಮೂಲಕ ರವಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಲು ಕೇರಳ ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ.
ಎಸಿಎಂಎಂ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಪಡೆಯಲು ಕೇರಳ ಪೊಲೀಸರು ಅರ್ಜಿ ಹಾಕಿದ್ದಾರೆ.